Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಮತ್ತು ಟೀಂ ಇಂಡಿಯಾ  ಮಾಜಿ ನಾಯಕ ಸೌರವ್ ಗಂಗೂಲಿ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಗಂಗೂಲಿ ತನ್ನ ವೈಯುಕ್ತಿಕ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ತಲೆತಿರುಗುವಿಕೆ ಉಂಟಾಗಿದೆ. ಇದಾದ ನಂತರ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದೆ.

“ಗಂಗೂಲಿ ಕಳೆದ ರಾತ್ರಿ ಆರೋಗ್ಯವಾಗಲಿಲ್ಲ. ಹಾಗಿದ್ದೂ ಅವರು ಶನಿವಾರ ಬೆಳಿಗ್ಗೆ ದಿನಚರಿಯನ್ನು ಮುಂದುವರಿಸಲು ನಿರ್ಧರಿಸಿದರು ಮತ್ತು ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಪ್ರಾರಂಭವಾದಾಗ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರು ಈ ಹಠಾತ್ ಬೆಳವಣಿಗೆಗೆ ಕಾರಣ ಹುಡುಕಲು ಪ್ರಯತ್ನಿಸಿದ್ದಾರೆ.ಇದು ಹೃದಯ ಸಮಸ್ಯೆ ಅಥವಾ ಇನ್ನಾವುದೇ ಸಮಸ್ಯೆಯಿಂದಾಗಿರಬಹುದು ”ಎಂದು ಆಸ್ಪತ್ರೆಯ ಮೂಲವೊಂದು ತಿಳಿಸಿದೆ.

ಗಂಗೂಲಿಯವರ ಚಿಕಿತ್ಸೆಗಾಗಿ ಆಸ್ಪತ್ರೆಯು ಈಗಾಗಲೇ ವಿಶೇಷ ವೈದ್ಯರ ಮಂಡಳಿಯನ್ನು ರಚಿಸಿದೆ, ಎಸ್‌ಎಸ್‌ಕೆಎಂ ಆಸ್ಪತ್ರೆಯ ಹೃದ್ರೋಗ ತಜ್ಞರನ್ನು ಗಂಗೂಲಿಯವರ ಚಿಕಿತ್ಸೆಗಾಗಿ ಕರೆತರಲಾಗುತ್ತಿದೆ.ಕಳೆದ ವರ್ಷ ನವೆಂಬರ್‌ನಲ್ಲಿ, ಗಂಗೂಲಿ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದರು ಎಂದು ನಾವಿಲ್ಲಿ ಸ್ಮರಿಸಬಹುದು

No Comments

Leave A Comment