Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಸೂಪರ್ ಸ್ಟಾರ್ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಅಸ್ಸಾಂ ಚೆಲುವೆ ಝಾರ ಯಾಸ್ಮೀನ್

ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ಸಿನಿಮಾ ‘ಸೂಪರ್ ಸ್ಟಾರ್’ ಸಿನಿಮಾ ಮೂಲಕ  ಝಾರಾ ಯಾಸ್ಮೀನ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ ಟೈಟಲ್ ಟ್ರ್ಯಾಕ್ ನಿಂದ , ಪೋಸ್ಟರ್ ಗಳು ಭಾರೀ ಕುತೂಹಲ ಮೂಡಿಸಿವೆ.

ಮಾಡೆಲ್ ಝಾರಾ ಯಾಶ್ಮಿನ್ ನಾಯಕಿಯಾಗಿ ಕರೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ, ಈ ಮೊದಲು ಪಂಜಾಬಿ ಸಿನಿಮಾದಲ್ಲಿ ಝಾರಾ ನಟಿಸಿದ್ದರು.

ಅವರು ದರ್ಶನ್ ರಾವಲ್, ವಡಾಲಿ ಬ್ರದರ್ಸ್, ಪ್ರೀತ್ ಹರ್ಪಾಲ್ ಮತ್ತು ಮಾಸ್ಟರ್ ಸಲೀಮ್ ಅವರಂತಹ ಗಾಯಕರ ಸಂಗೀತ ವೀಡಿಯೊಗಳ ಭಾಗವಾಗಿದ್ದರು.

ಇತ್ತೀಚೆಗೆ ಟಿ ಸಿರೀಸ್ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಸಲ್ಮಾನ್ ಯೂಸೂಫ್ ಖಾನ್ ಮತ್ತು ಸಾಚೆಟ್ ಟಂಡನ್ ಅವರ ಜೊತೆ ಹೆಜ್ಜೆ ಹಾಕಿದ್ದರು.

ಸೂಪರ್‌ಸ್ಟಾರ್ ಚಿತ್ರ ತಂಡ ಝಾರಾ ಅವರ ಎತ್ತರ ಮತ್ತು ಅವರ ನೃತ್ಯ ಕೌಶಲ್ಯಗಳನ್ನು ನೋಡಿದ ನಂತರ ಅವರು ಪ್ರಾಜೆಕ್ಟ್ ಸರಿಹೊಂದುತ್ತಾರೆ ಎಂದು ಭಾವಿಸಿದರು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆಕೆ ಟೆಸ್ಟ್ ನಡೆದ ನಂತರ ಫೈನಲ್ ಆಗಿದ್ದಾರೆ.

ಜನವರಿ ಮೊದಲ ವಾರದಿಂದ ಪುನರಾರಂಭಗೊಳ್ಳಲಿದ್ದು , ಮಂಗಳೂರಿನಲ್ಲಿ ಚಿತ್ರೀಕರಣದ ಮೂರನೇ ಶೆಡ್ಯೂಲ್ ನಲ್ಲಿ ಅವರು ತಂಡವನ್ನು ಸೇರಲಿದ್ದಾರೆ. ರಮೇಶ್ ವೆಂಕಟೇಶ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ ವಿಬಿ ಪ್ರೊಡಕ್ಷನ್  ಮತ್ತು ಮೈಲಾರಿ ಪ್ರೊಡಕ್ಷನ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾಘವೇಂದ್ರ ಸಿನಿಮಾ ಗೆ ಸಂಗೀತ ನೀಡಿದ್ದಾರೆ.

No Comments

Leave A Comment