Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಜೆಎನ್ ಯು ವಿದ್ಯಾರ್ಥಿ ಪ್ರತಿಭಟನೆ ಆಧಾರಿತ ‘ವರ್ತಮಾನಂ’ಗೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನಿರಾಕರಣೆ

ಕೊಚ್ಚಿ: ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಆಧಾರಿತ ಮಲಯಾಳಂ ಚಿತ್ರ ‘ವರ್ತಮಾನಂ’ಗೆ ಪ್ರಮಾಣ ಪತ್ರವನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಪ್ರಾದೇಶಿಕ ಕಚೇರಿ ನಿರಾಕರಿಸಿದೆ.

ಸಿದ್ಧಾರ್ಥ್‌ ಶಿವ  ನಿರ್ದೇಶನದ ಸಿನಿಮಾದಲ್ಲಿ ಪಾರ್ವತಿ ತಿರುವೊತು ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಆರ್ಯಾದನ್ ಶೌಕತ್ ಕಥೆ ಬರೆದು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಕೇರಳದ ಮಹಿಳೆಯೊಬ್ಬರು ಸಂಶೋಧನೆಯಲ್ಲಿ ತೊಡಗಲು ಜೆಎನ್‌ಯುಗೆ ಬರುತ್ತಾರೆ. ಈ ಮಹಿಳೆಯ ಜೆಎನ್‌ಯು ಪಯಣದ ಮೇಲೆ ಈ ಸಿನಿಮಾ ಆಧಾರಿತವಾಗಿದೆ. ಆದರೂ ಸಿನಿಮಾಗೆ ಪ್ರಮಾಣ ಪತ್ರವನ್ನು ನೀಡಲು ಸಿಬಿಎಫ್‌ಸಿ ತಿರಸ್ಕರಿಸಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಸಿಲ್ಲ.

ಹಾಗಾಗಿ ಈ ವಾರವೇ ‘ವರ್ತಮಾನಂ’ ಸಿನಿಮಾವನ್ನು ಮುಂಬೈನ ಪ್ರಮಾಣೀಕರಣ ಮಂಡಳಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು’ ಎಂದು ಸಿನಿಮಾ ನಿರ್ಮಾಪಕ, ಕಥೆಗಾರ ಆರ್ಯದನ್‌ ಶೌಕತ್‌ ತಿಳಿಸಿದರು.

ಚಲನಚಿತ್ರವು ರಾಷ್ಟ್ರ ವಿರೋಧಿ ಅಂಶಗಳನ್ನು ವೈಭವೀಕರಿಸುತ್ತದೆ. “ಜೆಎನ್‌ಯುನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಹೇಗೆ ಹಿಂಸಿಸಲಾಯಿತು ಎಂಬುದರ ಕುರಿತು ಈ ಚಿತ್ರ ಹೇಳುತ್ತದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಮತ್ತು ಸಿಬಿಎಫ್ ಸಿ ಸದಸ್ಯ ಸಂದೀಪ್ ಕುಮಾರ್ ತಿಳಿಸಿದ್ದಾರೆ.

No Comments

Leave A Comment