Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಬೆ೦ಗಳೂರು-ಉಡುಪಿಯ ವಿವಿದೆಡೆಯಲ್ಲಿ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಪ್ರಥಮ ಆರಾಧನೆ…

ಉಡುಪಿಯ ಪೇಜಾವರ ಮಠ ಹಾಗೂ ವಿದ್ಯೋದಯ ಆ೦ಗ್ಲಮಾಧ್ಯಮ ಶಾಲೆಯಲ್ಲಿ ಸೇರಿದ೦ತೆ ಶ್ರೀಕೃಷ್ಣಮಠ ಹಾಗೂ ರಥಬೀದಿಯ ಉಚಿತ ಶ್ರೀಕೃಷ್ಣಚಿಕಿತ್ಸಾಲಯದಲ್ಲಿ ಪೇಜಾವರ ಮಠಾಧೀಶರಾಗಿದ್ದ ಶ್ರೀವಿಶ್ವೇಶ ತೀರ್ಥಶ್ರೀಪಾದರ ಪ್ರಥಮ ಆರಾಧನೆಯ ಪ್ರಯುಕ್ತ ಗುರುವ೦ದನೆಯನ್ನು ಸಲ್ಲಿಸಲಾಯಿತು.
ರಥಬೀದಿಯ ಉಚಿತ ಶ್ರೀಕೃಷ್ಣಚಿಕಿತ್ಸಾಲಯದಲ್ಲಿ ಶಿವಾನ೦ದ ಭ೦ಡಾರ್ಕರ್,ಡಾ.ಅರ್ಚನಾ ಆಚಾರ್ಯ,ಡಾ.ಜಯ೦ತ್ ಕುಮಾರ್,ಡಾ.ಕೆ.ಸೂರ್ಯನಾರಾಯಣ,ಮಾಧ್ಯಮ ಪ್ರತಿನಿಧಿ ಟಿ.ಜಯಪ್ರಕಾಶ್ ಕಿಣಿ ಮತ್ತು ರಾಘವೇ೦ದ್ರ ಭಟ್ ರವರುಗುರುವ೦ದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಯವರ ಪ್ರಥಮ ಆರಾಧನೆ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ ರಾಮಚಂದ್ರ ಭಟ್ ನೇ ತೃತ್ವದಲ್ಲಿ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಿತು. ಬೆಳಿಗ್ಗೆಯಿಂದ ಸ್ಥಳೀಯ ಭಜನಾ ತಂಡಗಳಿಂದ ಭಜನೆ,ರುಕ್ಮಿಣಿ ಹಂಡೆ ಬಳಗದಿಂದ ಸಂಗೀತ,ವೀಣಾವಾದನ ಮಧ್ಯಾಹ್ನ ವಿ.ಷಣ್ಮುಖ ಹೆಬ್ಬಾರ್,ಸತ್ಯನಾರಾಯಣ ಆಚಾರ್, ಲಕ್ಷ್ಮೀನಾರಾಯಣ ಭಟ್ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

No Comments

Leave A Comment