Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಉಡುಪಿಯಲ್ಲಿ ಕನಕ ಜಯ೦ತಿ-ಸಾಧಕರಿಗೆ ಸನ್ಮಾನ

ಶ್ರೀಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿ ನಂತರ ರಥಬೀದಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು.

ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಆಶೀರ್ವಚನ ನೀಡಿದರು.ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ ಜ್ಯೋತಿಯಾತ್ರೆಯ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಕುರುಬರ ಸಂಘದ ನಿರ್ದೇಶಕರಾದ ಬಸವರಾಜು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.

No Comments

Leave A Comment