Log In
BREAKING NEWS >
ಅಷ್ಟಯತಿಗಳ ಉಪಸ್ಥಿತಿಯಲ್ಲಿ ವಿಜೃ೦ಭಣೆಯಲ್ಲಿಉಡುಪಿ ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ(ಹಗಲೋತ್ಸವ)........16ರಿ೦ದ 23ರವರೆಗೆ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ- ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಉಡುಪಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ಗಿರೀಶ್ ಎಂ. ಅಂಚನ್ ಆಯ್ಕೆ

ಉಡುಪಿ: ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನಗರಸಭೆಯ ಕುಂಜಿಬೆಟ್ಟು ವಾರ್ಡಿನ ಸದಸ್ಯ ಗಿರೀಶ್ ಎಂ. ಅಂಚನ್ ಅವರು ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಆಯ್ಕೆಯಾಗಿರುತ್ತಾರೆ.
ಸಭೆಯ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ವಹಿಸಿದ್ದರು. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್ ಕೆ.ಎಂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಭೆಯಲ್ಲಿ ಸ್ಥಾಯೀ ಸಮಿತಿ ಸದಸ್ಯರಾದ ಯೋಗೀಶ್ ವಿ. ಸಾಲ್ಯಾನ್, ಶ್ರೀಶ ಕೊಡವೂರು, ಮಂಜುಳಾ ವಿ ನಾಯಕ್, ಡಿ.ಬಾಲಕೃಷ್ಣ ಶೆಟ್ಟಿ, ವಿಜಯಲಕ್ಷಿ್ಮೀ, ಅಶೋಕ ನಾಯ್ಕ ಮಂಚಿಕುಮೇರಿ, ಚಂದ್ರಶೇಖರ ಯು. ಶೇರಿಗಾರ್, ವಿಜಯ ಪೂಜಾರಿ ಬೈಲೂರು, ಗಿರೀಶ್ ಎಂ. ಅಂಚನ್, ಗೀತಾ ದೇವರಾಯ ಶೇಟ್ ಮತ್ತು ಟಿ.ಜಿ.ಹೆಗ್ಡೆ ಉಪಸ್ಥಿತರಿದ್ದರು.

No Comments

Leave A Comment