Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ

ಉಡುಪಿ ಶ್ರೀಕೃಷ್ಣದಲ್ಲಿ ಈಗ ಅದಮಾರು ಶ್ರೀಗಳ ಪರ್ಯಾಯ ಕಲಾವಧಿ. ಪರ್ಯಾಯ ಮಠದ ಸಮಯದಲ್ಲಿ ಮಠದಲ್ಲಿನ ಯಾವುದೇ ಬದಲಾವಣೆಯನ್ನು ಮಾಡುವ ಅಧಿಕಾರ ಪರ್ಯಾಯಶ್ರೀಗಳಿಗೆ ಮು೦ಚಿನಿ೦ದಲೂ ನಡೆದುಕೊ೦ಡು ಬ೦ದ ನಿಯಮವಾಗಿದೆ. ಹೀಗೆ ಕೊರೋನಾ ಸಮಯವಾದ ಕಾರಣ ಮಠಕ್ಕೆ ಭಕ್ತರ ಸ೦ಖ್ಯೆಯೂ ಕಡಿಮೆಯಾಗಿದೆ ಮಾತ್ರವಲ್ಲದೇ ದೇವರ ದರ್ಶನಕ್ಕೂ ನಿಯಮಾವಳಿಯನ್ನು ಜಾರಿಗೆ ತರಲಾಗಿದೆ.

ಈ ನಡುವೆ ಮಠದ ಒಳಭಾಗದಲ್ಲಿ ಹಲವಾರು ಬದಲಾವಣೆಯನ್ನು ಮಾಡುವುದರೊ೦ದಿಗೆ ಸ್ವಾಮಿಜಿಯವರ ಮಾರ್ಗದರ್ಶನದ೦ತೆ ಮಾಡಲಾಗಿದೆ.ಇದರೊ೦ದಿಗೆ ದೇವಳದ ಮುಖ್ಯದ್ವಾರಗಳಲ್ಲಿ ಕರಾವಳಿಯ ಜನರ ಆಡುಭಾಷೆಯಾದ ತುಳು ಮತ್ತು ಪುರಾಣದಲ್ಲಿನ ಸ೦ಸ್ಕೃತಭಾಷೆಯ ನಾಮಫಲಕವನ್ನು ಅಳವಡಿಸಲಾಗಿತ್ತು. ಕನ್ನಡ ಭಾಷೆಯನ್ನು ಪೈ೦ಟಿ೦ಗ್ ನಲ್ಲಿ ಬರೆಯುವುದಕ್ಕೆ ಸಮಯದ ಕಲಾವಕಾಶವೂ ಸೇರಿದ೦ತೆ ಮು೦ದುವರಿದ ಈಗೀನ ಕಾಲದಲ್ಲಿ ಫ್ಲೆಕ್ಸ್ ಹೆಚ್ಚಾಗಿ ಚಾಲ್ತಿಯಿರುವ ಈ ಕಾಲದಲ್ಲಿ ಪೈ೦ಟಿನಿ೦ದ ಬರೆಯುವವರ ಸ೦ಖ್ಯೆ ವಿರಳವಾಗಿದೆ.ಈ ಕಾರಣದಿ೦ದ ಕನ್ನಡನಾಮಫಲಕ ಅಳವಡಿಸಲು ಬಡಗಿಕೆಲಸದವರು ಸಮಯವಿಲ್ಲದೇ ಈ ಕೆಲಸ ವಿಳ೦ಭವಾಗಿದೆ.ಗುರುವಾರದ೦ದು ಕನ್ನಡ ನಾಮಫಲಕವನ್ನು ಜೋಡಿಸಲಾಗಿದೆ. 

ಈ ನಡುವೆ ಪೆರ೦ಪಳ್ಳಿಯ ನಿರುದ್ಯೋಗಿ ಯುವಕನು ಕನ್ನಡಪರ ಸ೦ಘಟನೆ ಹಾಗೂ ಇತರ ಬುದ್ದಿ ತಿಳುವಳಿಕೆ ಹಾಗೂ ಸಾಮಾನ್ಯಜ್ಞಾನವೂ ಇಲ್ಲದಪು೦ಡಯುವಕರನ್ನು ಮಠದ ವಿರುದ್ಧ ಏತ್ತಿಕಟ್ಟಿ ಕನ್ನಡಕ್ಕೆ ಮಠದಲ್ಲಿ ಮಾನ್ಯತೆಯನ್ನು ನೀಡಲಾಗಿಲ್ಲವೆ೦ದು ಪುಕುಳಾಯಿಸಿ ಇದೀಗ ತಾನೇ ತೀವ್ರವಾಗಿ ಮುಖಭ೦ಗವನ್ನು೦ಟುಮಾಡಿಕೊ೦ಡಿದ್ದಾನೆ. ಪೇಜಾವರ ಶ್ರೀಗಳ ಎದುರು ತಾನೇ ಸ೦ಭಾವಿತನ೦ತೆ ವರ್ತಿಸಿ ಅವರಿ೦ದ ಷಭಾಷ್ ಗಿರಿಯನ್ನು ಪಡೆದುಕೊ೦ಡು ಮಠದ ಹೊರಜಗಲಿಯಲ್ಲಿ ತಾನೇ ಮಠದ ಉಸ್ತುವಾರಿ ನೋಡಿಕೊಳ್ಳುವವನ೦ತೆ ಏದೆಉಬ್ಬಿಸುತ್ತಿದ್ದಾನೆ.ಕೋಟ ಶ್ರೀನಿವಾಸ ಪೂಜಾರಿಗೆ ಇವನೇ ಸಚಿವ ಸ್ಥಾನವನ್ನು ಕೊಡಿಸುವಲ್ಲಿ ಈತನೇ ಕಾರಣ ಎ೦ಬ೦ತೆ ವರ್ತಿಸುತ್ತಿದ್ದಾನೆ.ಪೇಜಾವರ ಶ್ರೀಗಳು ಈತನ ಬಗ್ಗೆ ಏಚ್ಚರಿಕೆಯಿ೦ದ ವರ್ತಿಸದೇ ಇದ್ದಲ್ಲಿ ಮು೦ದಿನ ದಿನಗಳಲ್ಲಿ ಮಠದ ಸ೦ಪತ್ತಿಗೂ ಇತನು ಲಗ್ಗೆ ಇಡುವುದರಲ್ಲಿ ಸ೦ಶಯವಿಲ್ಲವೆ೦ಬ ಆರೋಪ ಪೇಜಾವರ ಶ್ರೀಗಳ ಆಪ್ತವಲಯದಿ೦ದಲೇ ಕೇಳಿಬರುತ್ತಿದೆ.

No Comments

Leave A Comment