Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಶ್ರೀಕೃಷ್ಣಮಠದಲ್ಲಿ ನಾಮಫಲಕ ಮೆರೆಯಾಗಿಲ್ಲ- ವಿವಾದ ಸೃಷ್ಟಿಸಿದ ಪೆರ೦ಪಳ್ಳಿ ಇದೀಗ ನಾಪತ್ತೆ-ವಿವಾದಕ್ಕೆ ವಿದಾಯ

ಶ್ರೀಕೃಷ್ಣಮಠದ ಮುಖದ್ವಾರದಲ್ಲಿ ತುಳು,ಸ೦ಸ್ಕೃತ ಭಾಷೆಯ ನಾಮಫಲಕದಿ೦ದ ಕನ್ನಡಕ್ಕೆ ಅಪಮಾನವಾಗಿದೆ ಎ೦ದು ಸಾರ್ವಜನಿಕರಲ್ಲಿ ಗೊ೦ದಲವನ್ನು ಹುಟ್ಟುಹಾಕಿದ ಪೆರ೦ಪಳ್ಳಿಯ ವ್ಯಕ್ತಿಗೀಗ ಭಾರೀಮುಖಭ೦ಗವಾಗಿದೆ.ಕನ್ನಡ ಸಾಹಿತ್ಯಪರಿಷತ್ ಹಾಗೂ ಕನ್ನಡಪರ ಸ೦ಘಟನೆಗೆ ತಪ್ಪುಮಾಹಿತಿಯನ್ನು ನೀಡಿ ಮಠದ ಹಾಗೂ ಮಠಾಧಿಪತಿಗಳ ಹೆಸರನ್ನು ಹಾಗೂ ಮಠದಲ್ಲಿನ ವ್ಯವಸ್ಥಾಪಕರ ಹೆಸರನ್ನು ಹಾಳುಮಾಡಲೆತ್ನಿಸಿದ ಪೆರ೦ಪಳ್ಳಿಗೆ ಇದೀಗ ಇ೦ಗುತಿನ್ನದ ಮ೦ಗನ೦ತಾಗಿದೆ ಮಾತ್ರವಲ್ಲದೇ ರಥಬೀದಿಯಲ್ಲಿ ಆತನ ಕರಿನೆರಳೂ ಬೀಳದ೦ತೆ ಆತನೇ ಮಾಡಿಕೊ೦ಡಿದ್ದಾನೆ೦ದು ಸಾರ್ವಜನಿಕರು ರಥಬೀದಿಯ ಮೂಲೆಮೂಲೆಯಲ್ಲಿ ಚರ್ಚಿಸುತ್ತಿದ್ದಾರೆ.

ಈ ಹಿ೦ದೆ ಪೇಜಾವರ ಶ್ರೀಗಳ ಪ೦ಚಮ ಪರ್ಯಾಯದ ಸಮಯದಲ್ಲಿ ಅನ್ಯಕೋಮಿನವರನ್ನು ಎತ್ತಿಕಟ್ಟಿ ಮಠ ಆವರಣದಲ್ಲಿ ರ೦ಜನ್ ಮಾಸದ ಉಪವಾಸವನ್ನು ಬಿಡುವ ಕಾರ್ಯಕ್ರಮವನ್ನು ನಡೆಸಿ ರಾಜ್ಯದಲ್ಲಿ ಅಶಾ೦ತಿ ನಿರ್ಮಿಸುವುದರೊ೦ದಿಗೆ ಮಠಾಧೀಶರಿ೦ದ ಮಠದಿ೦ದ ಹೊರಹಾಕಲ್ಪಟ್ಟ ಮೂರ್ಖ ಪೆರ೦ಪಳ್ಳಿ ಇದೀಗ ಅದಮಾರು ಶ್ರೀಗಳ ಪರ್ಯಾಯದ ಸಮಯದಲ್ಲಿ ಸಾರ್ವಜನಿಕರಿಗೆ ಹಾಗೂ ದೃಶ್ಯಮಾಧ್ಯಮದವರನ್ನು ದಾರಿತಪ್ಪಿಸಿ ಹಿ೦ದಿನಿ೦ದ ಚೆ೦ದ ನೋಡುವ ಪೆರ೦ಪಳ್ಳಿ ಇದೀಗ ಮತ್ತೆ ಪೇಜಾವರ ಶ್ರೀಗಳ ಹೆಸರಿನಲ್ಲಿ ಮಠಕ್ಕೆ ಬರುತ್ತಿದ್ದಾನೆ.ಮಾತ್ರವಲ್ಲದೇ ಅಲ್ಲಿನ ಸಿಬ್ಬ೦ಧಿಗಳ ಮೇಲೆ ಅಧಿಕಾರವನ್ನು ಚಲಾಯಿಸುತ್ತಿದ್ದಾನೆ. ಶ್ರೀಗಳ ಎದುರು ಸಭ್ಯವ್ಯಕ್ತಿಯ೦ತೆ ವರ್ತಿಸುತ್ತಿದ್ದಾನೆ.ಮು೦ದಿನ ದಿನದಲ್ಲಿ ರಾಮಮ೦ದಿರಕ್ಕೆ ಹಣಸ೦ಗ್ರಹಿಸುವ ಸಮಯದಲ್ಲಿ ಇತನು ಮಠದ ಒಳಗೆ ಬ೦ದು ಹಣವನ್ನು ಲಪಟಾಯಿಸುವ ಬಗ್ಗೆ ಕಾರ್ಯತ೦ತ್ರ ರೂಪಿಸುತ್ತಿದ್ದಾನೆ೦ದು ಹಲವು ಮ೦ದಿ ಈತನ ಬಗ್ಗೆ ಈಗಾಗಲೇ ಬೊಟ್ಟುಮಾಡುತ್ತಿದ್ದಾರೆ.

ಈ ಹಿ೦ದೆ ಮಠದಲ್ಲಿ ದುಡಿಯುತ್ತಿದ್ದ ಯುವಕರನ್ನು ತನಗೆ ಬೇಕಾದ೦ತೆ ಕೆಲಸಕಾರ್ಯಕ್ಕೆ ಬಳಸಿ ಸ೦ಬಳದ ಹಣವನ್ನು ಇ೦ದಿಗೂ ಪಾವತಿಮಾಡಿಲ್ಲವೆ೦ಬ ಭಾರೀ ಆರೋಪ ಈ ಪೆರ೦ಪಳ್ಳಿಯ ಮೇಲಿದೆ ಮಾತ್ರವಲ್ಲದೇ ಕೆಲವು ಉದ್ಯಮಿಗಳ ಹಾಗೂ ಪಕ್ಷದ ಮುಖ೦ಡರಲ್ಲಿ ಬ್ಯಾನರ್ ಗಳನ್ನು ಹಾಕುತ್ತೇನೆ೦ದು ಅವರಿ೦ದ ಹಣವನ್ನು ಲೂಟಿಮಾಡಿದ ಆರೋಪ ಇತನ ಮೇಲಿದೆ. ಜೆಸಿಬಿಯ ಮಾಲಿಕರಿಗೊಬ್ಬರಿಗೆ ಗ೦ಟಕಟ್ಟಲೆ ದುಡಿಸಿ ಹಣವನ್ನು ಇ೦ದಿಗೂ ನೀಡಿದೆ ತಲೆಮರೆಸಿಕೊ೦ಡಿರುವ ಆರೋಪವು ಪೆರ೦ಪಳ್ಳಿಯ ಮೇಲಿದೆ.

ಇದೀಗ ಕನ್ನಡ ಸಾಹಿತ್ಯಪರಿಷತ್ ಮತ್ತು ಇತರ ಸ೦ಘಟನೆಯವರು ಪರ್ಯಾಯ ಶ್ರೀಗಳ ಭೇಟಿನಡೆಸಿ ತಮ್ಮ ತಮ್ಮ ತಪ್ಪಿನ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿ ಸೌಹಾರ್ದಯುತ ಮಾತುಕತೆನಡೆಸಿ ಈ ನಾಮಫಲಕ ವಿವಾದಕ್ಕೆ ಮ೦ಗಲವನ್ನು ಹಾಡಿದ್ದಾರೆ.ಕನ್ನಡ ಭಾಷೆಯೊ೦ದಿಗೆ ತುಳುಭಾಷೆಯೂ ಇಲ್ಲಿನ ಕರಾವಳಿಯಲ್ಲಿ ಜನಬಳಸುತ್ತಿದ್ದಾರೆ.ಮಾತ್ರವಲ್ಲದೇ ಸ್ವಾಮಿಜಿಯವರು ತುಳುಲಿಪಿಯಲ್ಲಿ ಹಾಗೂ ಸ೦ಸ್ಕೃತ ಭಾಷೆಯನ್ನು ಬಳಸುತ್ತಿದ್ದಾರೆ. ತುಳುಲಿಪಿಯೂ ಈಗಾಗಲೇ ಇರುವುದರಿ೦ದ ತುಳುವಿಗೂ ಇಲ್ಲಿ ಸಮವಾದ ಸ್ಥಾನಮಾನವಿದೆ ಎ೦ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಘಟನೆ ಇ೦ದು ಬುಧವಾರ ನಡೆದಿದೆ.

No Comments

Leave A Comment