Log In
BREAKING NEWS >
ಅಷ್ಟಯತಿಗಳ ಉಪಸ್ಥಿತಿಯಲ್ಲಿ ವಿಜೃ೦ಭಣೆಯಲ್ಲಿಉಡುಪಿ ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ(ಹಗಲೋತ್ಸವ)........16ರಿ೦ದ 23ರವರೆಗೆ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ- ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ: 12000 ಏಕದಿನ ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್!

ಕ್ಯಾನ್ಬೆರಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  ಅತ್ಯಂತ ವೇಗವಾಗಿ 12,000 ಏಕದಿನ ರನ್ ಗಳಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ವಿಶ್ವದಾಖಲೆಗೆ ಪಾತ್ರವಾಗಿದ್ದಾರೆ.

ಈ ವಿಶೇಷ ದಾಖಲೆಗಾಗಿ ಕೊಹ್ಲಿಗೆ 23 ರನ್‌ಗಳ ಅಗತ್ಯವಿತ್ತು, ಇಂದಿನ ಪಂದ್ಯದಲ್ಲಿ ಕೊಹ್ಲಿ, ತಮ್ಮ 242 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಇನ್ನಿಂಗ್ಸ್‌ನ 13 ನೇ ಓವರ್‌ನಲ್ಲಿ ಸೀನ್ ಅಬೊಟ್ಟ್ ಅವರ ಬೌಲಿಂಗ್ ವೇಳೆ  ಈ ಮೈಲಿಗಲ್ಲು ತಲುಪಿದರು.

ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ಸಾಧನೆಯನ್ನು ಮಾಡಲು 300 ಪಂದ್ಯಗಳಷ್ಟು ಕಾಲಾವಕಾಶ ತೆಗೆದುಕೊಂಡಿದ್ದರು.

ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ತನ್ನ ವೃತ್ತಿ ಜೀವನದ 251 ನೇ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾನೆದ್ದಾರೆ. ಅವರು ಇದುವರೆಗೆ 43  ಶತಕ ಹಾಗೂ 59  ಅರ್ಧಶತಕಗಳಿಂದಿಗೆ 60 ರನ್ ಗಳ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.ಕೊಹ್ಲಿ 2008 ರಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು.

ಸಚಿನ್ 1989 ಮತ್ತು 2012 ರ ನಡುವೆ 463 ಏಕದಿನ ಪಂದ್ಯಗಳಿಂದ 49 ಶತಕ ಮತ್ತು 96 ಅರ್ಧಶತಕಗಳ ಸಹಾಯದಿಂದ 44.83 ಸರಾಸರಿಯಲ್ಲಿ 18426 ರನ್ ಗಳಿಸಿದರು.

No Comments

Leave A Comment