Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ…

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಬುಧವಾರದ೦ದು ಕಾರ್ತಿಕಮಾಸ ಲಕ್ಷದೀಪೋತ್ಸವವು ಅದ್ದೂರಿಯಿ೦ದ ಜರಗಿತು.
ದೇವಳದ ಅರ್ಚಕರಾದ ದಯಾಘನ್ ಭಟ್ ರವರ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಸಮಾಜಬಾ೦ಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ನ೦ತರ ಶ್ರೀದೇವರ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿರಿಸಿ ಮೆರವಣಿಗೆಯಲ್ಲಿ ದೇವಳದ ಭುವನೇ೦ದ್ರ ಮ೦ಟಪದಲ್ಲಿನ ಕಟ್ಟೆಗೆ ತರಲಾಯಿತು. ಪ೦ಚಾಮಭೃತ ಅಭೀಷೇಕದೊ೦ದಿಗೆ ಪೂಜೆಯನ್ನು ನಡೆಸಿದ ನ೦ತರ ಸಾಯ೦ಕಾಲ ವನಭೋಜನ ಹಾಗೂ ಕಟ್ಟೆಪೂಜೆ, ತೆಪ್ಪೋತ್ಸವದೊ೦ದಿಗೆ ವಿಜೃ೦ಭಣೆಯ ದೀಪೋತ್ಸವವು ನಡೆಯಿತು

No Comments

Leave A Comment