Log In
BREAKING NEWS >
ಅಷ್ಟಯತಿಗಳ ಉಪಸ್ಥಿತಿಯಲ್ಲಿ ವಿಜೃ೦ಭಣೆಯಲ್ಲಿಉಡುಪಿ ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ(ಹಗಲೋತ್ಸವ)........16ರಿ೦ದ 23ರವರೆಗೆ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ- ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಬೆಂಗಳೂರು: ನಿಶ್ಚಿತಾರ್ಥವಾಗಿ ಎರಡೇ ದಿನಕ್ಕೆ ಯುವತಿ ನೇಣಿಗೆ ಶರಣು!

ಬೆಂಗಳೂರು: ನಿಶ್ಚಿತಾರ್ಥವಾಗಿ ಎರಡೇ  ದಿನಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರು ಉತ್ತರ ತಾಲೂಕು ಕದುರುಗೆರೆಯಲ್ಲಿ ನಡೆದಿದೆ.

ಇನ್ನೇನು ಕೆಲ ದಿನಗಳಲ್ಲಿ ವಿವಾಹವಾಗಿ ಹೊಸ ಬದುಕಿಗೆ ಪಾದಾರ್ಪಣೆ ಮಾಡಬೇಕಿದ್ದ ಕದುರುಗೆರೆ ನಿವಾಸಿ  ರೇಖಾ(23) ಆತ್ಮಹತ್ಯೆಗೆ ಶರಾಣಿರುವ ಯುವತಿ.  ಈಕೆಗೆ ನೆಲಮಂಗಲದ ಒಂದು ಅನುಕೂಲಕರ ಕುಟುಂಬದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು.

ಆದರೆ ನಿಶ್ಚಿತಾರ್ಥ ನಡೆದು ಎರಡೇ ದಿನಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೇಖಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿದ್ದಾಳೆ. ಈಕೆಯ ಸಾವು ಹಲವಾರು ಪ್ರಶ್ನೆಗೆ, ಅನುಮಾನಕ್ಕೆ ಕಾರಣವಾಗಿದೆ.

ಮೃತ ರೇಖಾ ಎಂಬಿಎ  ವ್ಯಾಸಂಗ ಮಾಡಿದ್ದಳು. ನಿಶ್ಚಿತಾರ್ಥದ ನಂತರವೂ ಭಾವೀ ಪತಿಯೊಂದಿಗೆ ಅನ್ಯೋನ್ಯತೆಯಿಂಡ ಫೋನ್ ನಲ್ಲಿ ಮಾತನಾಡಿದ್ದಳೆಂದು ಹೇಳಲಾಗಿದೆ. ಯುವತಿಯ ಪೋಷಕರು ಆಕೆಗೆ ಹೊಟ್ಟೆನೋವಿನ ಸಮಸ್ಯೆ ಇದ್ದದ್ದಾಗಿಯೂ ನೋವಿ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ನಿಜವಾದ ಕಾರಣ ಇನ್ನೂ ನಿಗೂಢವಾಗಿದೆ.

ಒಟ್ತಾರೆ ಘಟನೆಗೆ ಸಂಬಂಧಿಸಿ  ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

No Comments

Leave A Comment