ಪುತ್ತೂರು: ಬೈಕ್ ಗೆ ಹಿಂಬದಿಯಿಂದ ವಾಹನ ಡಿಕ್ಕಿ, ಸವಾರರಿಬ್ಬರು ಸಾವು
ಪುತ್ತೂರು: ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಜಯರಾಮ್ಗೌಡ ಎಂದು ಗುರುತಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿದ್ದ ಇಬ್ಬರೂ ತಮ್ಮ ಮನೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಇಬ್ಬರೂ ಕನ್ಸ್ಟ್ರಕ್ಷನ್ ಸೂಪರ್ ವೈಸರ್ ಆಗಿದ್ದರೆಂದು ತಿಳಿಸುಬಂದಿದೆ.
ಅಪಘಾತ ನಡೆದ ನಂತರ ಅಪಘಾತಕ್ಕೆ ಕಾರಣವಾದ ವಾಹನ ವೇಗವಾಗಿ ತೆರಳಿದೆ, ಕೆಲ ಸಮಯದ ನಂತರ ಅದನ್ನು ತನ್ನೀರ್ಪಂತ ಗ್ರಾಮ ಅಲೈಕ್ ರಸ್ತೆಯಲ್ಲಿ ಪತ್ತೆ ಮಾಡಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.