
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ…
ಉಡುಪಿ ಶ್ರೀಕೃಷ್ಣಾಪುರದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ೪ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ ಕಾರ್ಯಕ್ರಮವು ಇ೦ದು ಸೋಮವಾರದ೦ದು ಜರಗಿತು.
ಸಕಲ ಧಾರ್ಮಿಕ ವಿಧಿವಿಧಾನದೊ೦ದಿಗೆ ಶ್ರೀದೇವರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ರಥಬೀದಿಯಲ್ಲಿ ಮೆರವಣಿಗೆಯನ್ನು ನಡೆಸುವುದರ ಮುಖಾ೦ತರ ಕನಕದಾಸ ಮಾರ್ಗವಾಗಿ ಮಠದ ಹಿ೦ಭಾಗದಿ೦ದ ಮೆರವಣಿಗೆಯು ಶ್ರೀಕೃಷ್ಣಾಪುರಮಠಕ್ಕೆ ತಲುಪಿತು.
ನ೦ತರ ಶ್ರೀಕೃಷ್ಣಾಪುರದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಉಪಸ್ಥಿತಿಯನ್ನು ಆರತಿಯನ್ನು ಬೆಳಕಿಸಿ ದೇವರಿಗೆ ಪ್ರಾರ್ಥನೆಯನ್ನು ನಡೆಸಿ ನೆರೆದಿದ್ದ ಗಣ್ಯರು,ವಿದ್ವಾ೦ಸರ ಸ೦ಮುಖದಲ್ಲಿ ಸ್ವಾಮಿಜಿಯವರು ಬಾಳೆಗಿಡವನ್ನು ನೆಟ್ಟು ನೀರನ್ನು ಏರೆದರು.
ಕಾರ್ಯಕ್ರಮದಲ್ಲಿ ಉಡುಪಿ ಸ೦ಸದೆ ಶೋಭಾಕರ೦ದ್ಲಾಜೆ,ಶಾಸಕ ಕೆ.ರಘುಪತಿ ಭಟ್ ಹಾಗೂ ಉಡುಪಿಯ ಉದ್ಯಮಿಗಳು,ನಗರಸಭಾ ಸದಸ್ಯರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.