ಫಾರ್ಚುನರ್ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ : ಯುವತಿ ಸಾವು : ಮತ್ತೋರ್ವ ಯುವತಿ ಗಂಭೀರ..!
ಸಾವನ್ನಪ್ಪಿದ ಯುವತಿ ಕುಂದಾಪುರದ ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ ಎಂದು ತಿಳಿದು ಬಂದಿದೆ.ಹಿಂಬದಿ ಸವಾರೆ ಉಜಿರೆ ಮೂಲದ ಪ್ರಜ್ಞಾ ಗಂಭೀರ ಗಾಯಗೊಂಡ ಯುವತಿ ಎನ್ನಲಾಗಿದೆ.ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಕೋಟದ ರಾಷ್ಟ್ರೀಯ ಹೆದ್ದಾರಿ ಕೃಷ್ಣಭವನ ಹೋಟೆಲ್ ಎದುರುಗಡೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದು ಇವರ ವಾಹನಕ್ಕೆ ಫಾರ್ಚುನರ್ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
