Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಫ್ಯಾಂಟಮ್ ತಂಡದಿಂದ ಗುಡ್ ನ್ಯೂಸ್‌: ‘ವಿಕ್ರಾಂತ್ ರೋಣಾ’ ಕಿಚ್ಚ ಸುದೀಪ್ ಜೊತೆ ಕತ್ರಿನಾ ಕೈಫ್ ಹೆಜ್ಜೆ?

ಹಾಲಿವುಡ್ ರೇಂಜ್‌ನಲ್ಲಿ ತಯಾರಾಗುತ್ತಿರುವ ‘ಫ್ಯಾಂಟಮ್’ ಚಿತ್ರ ತಂಡದಿಂದ ಗುಡ್‌ ನ್ಯೂಸ್‌ವೊಂದು ಹೊರ ಬಂದಿದೆ. ವಿಕ್ರಾಂತ್‌ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್‌ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ ಸೊಂಟ ಬಳುಕಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕೇರಳದಲ್ಲಿ ಡಿಸೆಂಬರ್‌ ಮೊದಲ ವಾರದಿಂದ 30 ದಿನಗಳ ಚಿತ್ರೀಕರಣ ಆರಂಭವಾಗಲಿದೆ. ‘ಈ ಚಿತ್ರದಲ್ಲಿ ಸೂಪರ್‌ ಆಗಿರುವ ಹಾಡೊಂದು ಇದೆ. ಆ ಹಾಡಿಗೆ  ಕತ್ರಿನಾ ಕೈಫ್‌ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ನಿರ್ಧರಿಸಿರುವ ಚಿತ್ರ ತಂಡ ಈಗಾಗಲೇ ಕತ್ರಿನಾ ಅವರ ಬಳಿ ಚರ್ಚಿಸಿದ್ದು ಡೇಟ್ಸ್‌ ಮತ್ತಿತರ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಹೈದರಾಬಾದ್ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಲಾಸ್ಟ್‌ ಶೆಡ್ಯೂಲ್‌ ಡಿಸೆಂಬರ್‌ನಲ್ಲಿದೆ. ಬೆಂಗಳೂರಿನಲ್ಲಿ ಹಾಕಲಾಗುವ ಅದ್ಧೂರಿ ಸೆಟ್‌ನಲ್ಲಿ ಕತ್ರಿನಾ ಹಾಡಿಗೆ ಹೆಜ್ಜೆ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

No Comments

Leave A Comment