Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಕಿಚ್ಚನ ಕಟ್ಟುಮಸ್ತು ದೇಹಕ್ಕೆ ಅಭಿಮಾನಿಗಳು ಫಿದಾ!

ಅನೂಪ್ ಭಂಡಾರಿ ನಿರ್ದೇಶನದ ನಾಯಕ ನಟ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಬಹುತೇಕ ಮುಗಿದು ಕೊನೆಯ ಭಾಗ ಮಾತ್ರ ಬಾಕಿ ಉಳಿದಿದೆ.

ಶೂಟಿಂಗ್ ಆರಂಭದ ದಿನದಿಂದಲೂ ಸಾಕಷ್ಟು ಸದ್ದುಮಾಡುತ್ತಿದೆ. ಈ ಚಿತ್ರಕ್ಕೆ ಸಹ ಕಿಚ್ಚ ಸುದೀಪ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಅವರು ನಿನ್ನೆ ಒಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು ಅದು ಸಾಕಷ್ಟು ಸದ್ದು ಮಾಡುತ್ತಿದೆ.

ದೇಹದ ಹಿಂದೆ ಬೆನ್ನಿನ ಕಟ್ಟುಮಸ್ತು ಜಿಮ್ ದೇಹವನ್ನು ತೋರಿಸಿ ಉತ್ತಮ ಆಹಾರ, ಶಿಸ್ತುಬದ್ಧ ಜೀವನಶೈಲಿಗಳಿಂದ ಕೊಂಚ ಫಲಿತಾಂಶ ಸಿಕ್ಕಿದೆ. ಸುದೀರ್ಘ ಕಾಲದ ವಿರಾಮದ ನಂತರ ವರ್ಕೌಟ್ ಮತ್ತೆ ಆರಂಭಿಸಿದ್ದೇನೆ ಎಂದು ಫ್ಯಾಂಟಮ್ ಚಿತ್ರದ ಕ್ಲ್ಸೈಮ್ಯಾಕ್ಸ್ ದೃಶ್ಯದ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

No Comments

Leave A Comment