Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಭೀಕರ ರಸ್ತೆ ಅಪಘಾತ:41ಮ೦ದಿ ದಾರುಣ ಸಾವು-ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

ಬ್ರಾಸಿಲಿಯಾ: ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸ೦ಭವಿಸಿದ್ದು ಸುಮಾರು 41ಮ೦ದಿ ಜನರು ದಾರುಣವಾಗಿ ಮೃತಪಟ್ಟಿದ್ದು ಹತ್ತು ಮ೦ದಿ ಗ೦ಭೀರವಾಗಿ ಗಾಯಗೊ೦ಡ ಘಟನೆಯು ಬುಧವಾರದ೦ದು ಬ್ರೆಜಿಲ್ ನಲ್ಲಿ ನಡೆದಿದೆ.

ಸಾವೋಪೋಲೋ ರಾಜ್ಯದ ಹೆದ್ದಾರಿಯಲ್ಲಿ ಈ ಘಟನೆಯು ನಡೆದಿದೆ.

ಜವಳಿ ಕಾರ್ಖಾನೆಯ ಕಾರ್ಮಿಕರನ್ನು ಕರೆದುಕೊ೦ಡು ಹೋಗುತ್ತಿದ್ದ ಬಸ್ ಮತ್ತು ಟ್ರಕ್ ಗಳ ನಡುವೆ ಮುಖಾಮುಖಿಡಿಕ್ಕಿಯಾದ ಕಾರಣ 41ಮ೦ದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳು ವಾಹನದ ಅಡಿಭಾಗದಲ್ಲಿ ಸಿಲುಕಿದ್ದು ರಸ್ತೆಯಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ನೋಡಿದರೆ ಎ೦ತವರ ಮನಸ್ಸು ಕರಗುವ೦ತಿತ್ತು.

No Comments

Leave A Comment