ಶ್ರೀಕೃಷ್ಣಮಠದಲ್ಲಿ ಪರ್ಯಾಯಶ್ರೀಈಶಪ್ರಿಯತೀರ್ಥರು,ಪೇಜಾವರ ಶ್ರೀಪಾದರು ಮತ್ತು ಪಲಿಮಾರುಮಠದಲ್ಲಿ ಶ್ರೀವಿದ್ಯಾಧೀಶ ಶ್ರೀಪಾದರರಿ೦ದ ಮುದ್ರಾಧಾರಣೆ
ಶ್ರೀ ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ದಿನವಾದ ದೇವಪ್ರಬೋಧಿನಿ ಏಕಾದಶಿಯಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು.
ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.ನಂತರ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು. ಇದೇ ಸ೦ದರ್ಭದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶರ ತೀರ್ಥಶ್ರೀಪಾದರು ಮುದ್ರಾಧಾರಣೆ ಕಾರ್ಯಕ್ರಮವನ್ನು ನಡೆಸಿದರು ಇಲ್ಲಿಯೂ ಹಲವಾರುಮ೦ದಿ ಭಕ್ತರು ಸ್ವಾಮಿಜಿಯವರಿ೦ದ ಮುದ್ರಾಧಾರಣೆಯನ್ನು ಪದೆದುಕೊ೦ಡರು.