Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಮಂಗಳೂರಿನಲ್ಲಿ ರೌಡಿಶೀಟರ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ- ಮೃತದೇಹ ಪತ್ತೆ

ಮಂಗಳೂರು: ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಎಸೆದ ಸ್ಥಿತಿಯಲ್ಲಿ ಬೊಕ್ಕಪಟ್ಣದ ರೌಡಿ ಶೀಟರ್ ಇಂದ್ರಜಿತ್ (45) ಶವ ಪತ್ತೆಯಾಗಿದೆ.

ಗುರುವಾರ ನಸುಕಿನ ಜಾವ ನಗರದ ಕುದ್ರೋಳಿ ಸಮೀಪದ ಕರ್ನಲ್ ಗಾರ್ಡನ್ ಬಳಿ ರೌಡಿಶೀಟರ್ ಮೃತದೇಹ ಪತ್ತೆಯಾಗಿದೆ.

ಕೊಲೆಯಾದ ಇಂದ್ರಜೀತ್ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಗಾರ್ಡನ್ ಬಳಿ ಎಸೆಯಲಾಗಿದ್ದು, ಬುಧವಾರ ತಡರಾತ್ರಿಯಿಂದ ಗುರುವಾರ ನಸುಕಿನಲ್ಲಿ ದುಷ್ಕರ್ಮಿಗಳು ಹತ್ಯೆಗೈದಿರಬಹುದು ಎಂದೂ ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

No Comments

Leave A Comment