Log In
BREAKING NEWS >
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ: 29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ...

ಮೂತ್ರ ಪಿಂಡ ವೈಫಲ್ಯ: ಖ್ಯಾತ ಹಿಂದಿ ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ

ಮುಂಬೈ: ಖ್ಯಾತ ಹಿಂದಿ ಕಿರುತೆರೆ ನಟಿ ಲೀನಾ ಆಚಾರ್ಯ ನಿಧನರಾಗಿದ್ದು ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಲೀನಾ, ಹಿಂದಿಯ ‘ಶೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಹಾಗೂ ಕ್ಲಾಸ್ ಆಫ್ 2020 ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ ಬಾಲಿವುಡ್‌ನ ಹಿಚ್ಕಿ ಸಿನಿಮಾದಲ್ಲೂ ಆಕೆ ನಟಿಸಿದ್ದರು.  ‘ಲೀನಾ ಕಳೆದ ಒಂದೂವರೆ ವರ್ಷದಿಂದ  ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಆದರೂ ಆಕೆ ಬದುಕಲಿಲ್ಲ’ ಎಂದು ಶೇಠ್‌ ಜೀ ಸಹನಟ ವರ್ಷಿಪ್‌ ಖನ್ನಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕ್ಲಾಸ್ ಆಫ್ 2020 ನಟ ರೋಹನ್ ಮೆಹ್ರಾ ಕೂಡ ಲೀನಾ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಲ್ಲದೇ ಟ್ವಿಟ್ಟರ್ ಖಾತೆಯಲ್ಲಿ ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಲೀನಾ ಮ್ಯಾಮ್‌, ಕಳೆದ ವರ್ಷ ಈ ಸಮಯದಲ್ಲಿ ನಾವು ಕ್ಲಾಸ್ ಆಫ್ 2020 ಶೂಟಿಂಗ್ ನಲ್ಲಿದ್ದೆವು. ನಿಮ್ಮನ್ನು ತುಂಬಾ ಮಿಸ್  ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

No Comments

Leave A Comment