Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ವಿಸ್ಕಾನ್ಸಿನ್ ಮಾಲ್ ನಲ್ಲಿ ಗುಂಡಿನ ದಾಳಿ: 8 ಮಂದಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್‌ನ ವೌವಾಟೋಸಾದ ಮೇಫೇರ್ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿ ನಡೆದಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್ ತುರ್ತು ರೇಡಿಯೋ ಕೇಂದ್ರ ವರದಿ ಮಾಡಿದೆ.

ಗುಂಡಿನ ಶಬ್ದ ಕೇಳಿ ಬಂದಿದೆ ಎಂದು ಶುಕ್ರವಾರ ಸಾಕ್ಷಿಗಳನ್ನು ಉಲ್ಲೇಖಿಸಿ ಸ್ಥಳಿಯ ಮಾದ್ಯಮ ವರದಿ ಮಾಡಿದೆ.

ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು ಅವರೆಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭದ್ರತಾ ಪಡೆಗಳು ತೆರಳಿದಾಗ ಸ್ಥಳದಿಂದ ದಾಳಿಕೋರ ನಾಪತ್ತೆಯಾಗಿದ್ದ. ಗಾಯಗೊಂಡಿರುವ 8 ಮಂದಿಯಲ್ಲಿ 7 ಮಂದಿ ವಯಸ್ಕರಾಗಿದ್ದು, ಮತ್ತೊರ್ವ ಹದಿಹರಿಯದ ಯುವಕನಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

No Comments

Leave A Comment