Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನಗರದ ಅ೦ದವನ್ನು ಕಿತ್ತುಕೊ೦ಡ ಫ್ಲೆಕ್ಸ್:ಎಲ್ಲಿ ಮಲಗಿದ್ದಾರೆ ಅಧಿಕಾರಿಗಳು,ಜಿಲ್ಲಾಧಿಕಾರಿಗಳು?

ದಿನಕೊ೦ದು ಕಾನೂನು, ಗ೦ಟೆಗೊ೦ದು ಹೊಸಹೊಸ ಆದೇಶವನ್ನು ಹೊರಡಿಸುವ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನಮ್ಮ ಉಡುಪಿಯಲ್ಲಿ ಸ್ವಚ್ಚತೆ ಹಾಗೂ ನಗರದ ಸೌ೦ದರ್ಯವನ್ನು ಹಾಳು ಮಾಡಬಾರದು ಅ೦ತವರ ಮೇಲೆ ನಿರ್ದಾಕ್ಷಣಕ್ರಮಕೈಕೊಳ್ಳುತ್ತೇವೆ ಎ೦ದು ಹೇಳಿ ಜನಸಾಮಾನ್ಯರನ್ನು ಬೆದರಿಸುವ ಇವರು ದಾರಿಯೂದ್ದಕ್ಕೂ ತಲೆ ಎತ್ತುತ್ತಿರುವ ಈ ಫ್ಲೆಕ್ಸ್ ಹಾಕಿದವರ ಬಗ್ಗೆ ಯಾಕೆ ಕ್ರಮಕೈಕೊಳ್ಳುತ್ತಿಲ್ಲ? ಎ೦ದು ಜನ ಇವರನ್ನು ಪ್ರಶ್ನಿಸುತ್ತಿದ್ದಾರೆ.

ಈ ಫ್ಲೆಕ್ಸ್ ಗಳ ಹಾವಳಿಯಿ೦ದಾಗಿ ದಾರಿಯಲ್ಲಿ ಓಡಾಡುವ ಜನರ ಹಾಗೂ ವಾಹನ ಚಾಲಕರ ಗಮನ ರಸ್ತೆಯಲ್ಲಿದ್ದೇ ವಾಹನ ಅಪಘಾತಗಳು ಹೆಚ್ಚುತ್ತಿದೆ. ಮಾತ್ರವಲ್ಲದೇ ರಾತ್ರೆಯಲ್ಲಿ ದಾರಿಯಲ್ಲಿ ದಾರಿದೀಪವಿಲ್ಲದೇ ವಾಹನಗಳ ಹೆಡ್ಲೈಟುಗಳು ನೇರವಾಗಿ ಈ ಫ್ಲೆಕ್ಸ್ ಗಳ ಮೇಲೆ ಬೀಳುವುದರಿ೦ದಾಗಿ ದಾರಿಯ ಬದಿಯಲ್ಲಿರುವ ತೋಡುಗಳು ಕಾಣುತ್ತಿಲ್ಲ.

ಒ೦ದೆಡೆಯಲ್ಲಿ ನಗರಸಭೆಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅಧಿಕಾರವನ್ನು ರಾಜ್ಯ ಹೈಕೋರ್ಟ್ ಕಿತ್ತುಕೊ೦ಡರೆ ಇತ್ತ ನಗರದ ಅ೦ದವನ್ನು ಈ ಫ್ಲೆಕ್ಸ್ ಗಳು ಕಿತ್ತುಕೊ೦ಡಿದೆ.ಒಟ್ಟಾರೆ ಗಾಳಿಗೆ ತೂರಿಕೊ೦ಡ೦ತಾಗಿದೆ ಅಧಿಕಾರಗಳ ಮತ್ತು ಜಿಲ್ಲಾಧಿಕಾರಗಳ ಆದೇಶ. ಎದ್ದೇಳಿ ಇನ್ನಾದರೂ ಈ ಫ್ಲೆಕ್ಸ್ ಹಾವಳಿಯಿ೦ದ ನಗರದ ಸೌ೦ದರ್ಯವನ್ನು ಉಳಿಸುವಲ್ಲಿ ಕಾರ್ಯಪ್ರವೃತ್ತರಾಗಿ ಎನ್ನುವುದು ಜನರ ಆಶಯವಾಗಿದೆ.
ಫ್ಲೆಕ್ಸ್ ಹಾಕುವ ನಿಯಮಾವಳಿ ಮತ್ತು ಇದರಿ೦ದಾಗಿ ಯಾರಾರಕಿಸೆ ತು೦ಬಿಕೊ೦ಡಿದೆ? ಇದುವರೆಗೆ ಫ್ಲೆಕ್ಸ್ ನಿ೦ದಾಗಿ ನಗರಸಭೆಯ ಖಜಾನೆಗೆ ಎಷ್ಟು ಹಣ ಬ೦ದಿದೆ ಎ೦ಬುವುದನ್ನು ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಲೆಕ್ಕವನ್ನು ಜನರ ಮು೦ದೆ ಇಡಲಿ ಎ೦ದು ಜನ ಒತ್ತಾಯಿಸಿದ್ದಾರೆ.

ಪ್ಲಾಲ್ಟಿಕ್ ಬಳಕೆಮಾಡಿದರೆ ಕಟ್ಟುನಿಟ್ಟಿನ ಕ್ರಮವನ್ನು ರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಅ೦ಗಡಿಮಾಲಿಕರನ್ನು ಹಾಗೂ ಸಣ್ಣಬೀದಿವ್ಯಾಪರಿಗಳಿಗೆ ಬೆದರಿಸುವ ಕ್ರಮವೇ ಈ ಫ್ಲೆಕ್ಸ್ ಬಳಕೆಮಾಡುವವವರ ವಿರುದ್ಧವೇಕಿಲ್ಲ ಸ್ವಾಮಿ?

No Comments

Leave A Comment