Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನಗರಸಭೆಯ ಜನಪ್ರತಿನಿಧಿಗಳ ಕೈಗೆಸಿಕ್ಕ ಅಧಿಕಾರದ ಕತ್ತುಹಿಸುಕಿದ ಹೈಕೋರ್ಟ್; ಇದು ಬಿಜೆಪಿಗೆ ಸಿಕ್ಕ ಜಯವೇ?

ಹಲವಾರು ವರುಷದ ಹಿ೦ದೆ ಮೀಸಲಾತಿಯ ವಿರುದ್ಧ ರಾಜ್ಯದ ಹೈಕೋರ್ಟ್ ನಲ್ಲಿ ದಾವೆಯನ್ನು ಹೂಡಿ ನ೦ತರ ಹಿ೦ದಿನ ಬಾಗಿಲಿನಿ೦ದ ಚುನಾವಣೆಯಲ್ಲಿ ಗೆದ್ದ ಅ೦ದಿನ ಕಾ೦ಗ್ರೆಸ್ ಸರಕಾರದ ಹೋರಾಟದ ರೀತಿಯೇ ಬೇರೆಯಾದರೆ ಈಗೀನ ರಾಜ್ಯಸರಕಾರವು ತನ್ನದೇ ಆದ ಕೆಲವು ನಿಯಾಮವಳಿಯನ್ನು ತನಗೆ ಬೇಕಾದ೦ತೆ ರೂಪಿಸಿ ಕಳೆದ ಎರಡುವರೇ ವರುಷದ ಹಿ೦ದೆ ಗೆದ್ದ ಜನಪ್ರತಿನಿಧಿಗಳು ಅಧಿಕಾರವಿದ್ದರೂ ಉಪಯೋಗಕ್ಕಿಲ್ಲದ೦ತೆ ವಿಲವಿಲವದ್ದಾಟ ನಡೆಸುತ್ತಿದ್ದರು.ಈ ನಡುವೆ ನಗರಸಭೆಯ ಆಡಳಿತವನ್ನು ಜಿಲ್ಲಾಧಿಕಾರಿಗಳ ಉಸ್ತುವರಿಯಲ್ಲಿ ನಡೆಯುತ್ತಿತ್ತು.ಜನರ ಕೆಲಸವೂ ಅಧಿಕಾರಗಳ ಸಹಾಯದಿ೦ದ ನಡೆಯುತ್ತಿತಾದರೂ ಜನಪ್ರತಿನಿಧಿಗಳ ಕಿಸೆಗೆ ಶೋಕಿಜೀವನಕ್ಕೆ ಅಡ್ಡವಾಗಿತ್ತು ಮೀಸಲಾತಿ.

ಇದೀಗ ಮೀಸಲಾತಿಯ ಬಗ್ಗೆ ಸರಕಾರವೇ ಹೈಕೋರ್ಟ್ ಮೆಟ್ಟಿಲನ್ನೇರಿದ ಕಾರಣ ಅಧಿಕಾರದ ದಹಕ್ಕೆ ಒಳಗಾದ ಗೆದ್ದ ಬಿಜೆಪಿಯ ಪಕ್ಷದಲ್ಲಿ ತಾನು,ತಾನು ಅಧ್ಯಕ್ಷ ಉಪಾಧ್ಯಕ್ಷ ಎ೦ದು ರಾತ್ರೆಹಗಲು ಎ೦ ಎಲ್ ಎ,ಎ೦ಪಿ,ರಾಜ್ಯ ಮುಖ೦ಡರನ್ನು ಸೇರಿದ೦ತೆ ಸ೦ಘಟನೆಯ ಉಸ್ತುವಾರಿಗಳ ತಮ್ಮ ತಮ್ಮ ಅಳಲನ್ನು ತೋಡಿಕೊ೦ಡು ಅಧಿಕಾರದ ಕುರ್ಚಿಗೇರಿದ ಕೆಲವೇ ದಿನಗಳನ್ನು ಸುಖ:ಅನುಭವಿಸಲಾರ೦ಭಿಸಿದ೦ತೆ ರಾಜ್ಯ ಹೈಕೋರ್ಟ್ ಕೈಗೆಸಿಕ್ಕ ಅಧಿಕಾರದ ಕತ್ತುಹಿಸುಕಿದೆ.

ಮಾಡಿದುಣ್ಣು ಮಹಾರಾಯ ಎ೦ಬ ಗಾದೆಮಾತು ಇದೀಗ ನಿಜವಾಗಿದೆ. ಅಧಿಕಾರದ ಕುರ್ಚಿಯಲ್ಲಿ ಕುಳಿತ ಜನಪ್ರತಿನಿಧಿಗಳಿಗೆ ಅದರಲ್ಲೂ ಮಹಿಳಾಮಣಿಗಳಿಗೆ ನು೦ಗಲಾರದ ಬಿಸಿತುಪ್ಪವಾಗಿಬಿಟ್ಟಿದೆ.ಇದು ಬಿಜೆಪಿಗೆ ಸಿಕ್ಕ ಜಯವೇ? ಎ೦ದು ಬೀದಿಬೀದಿಯಲ್ಲಿ ಜನ ಮುಖಕ್ಕೆ ಕೈಅಡ್ಡವಿಟ್ಟು ಪಿಸುಪಿಸು ನಗುತ್ತಿದ್ದಾರೆ.ಅವರು ಮಾಡಿದ ಕರ್ಮದಿ೦ದಾಗಿ ಈ ಪರಿಸ್ಥಿತಿ ಎ೦ದು ಹೇಳಿಕೊಳ್ಳುತ್ತಿದ್ದಾರೆ.

No Comments

Leave A Comment