Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ನಟಿ ಪಾರು

ಮೇಲ್ಮರವತ್ತೂರ್: ತಮಿಳುನಾಡು ಬಿಜೆಪಿ ನಾಯಕರಿ ಹಾಗೂ ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ಮೇಲ್ಮರವತ್ತೂರ್’ನಲ್ಲಿ ನಡೆದಿದೆ.

ಕಾರಿನ ಎದುರಿಗೆ ಬಂದಿರುವ ಟ್ಯಾಂಕರ್ ಒಂದು ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಖುಷ್ಬೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಖುಷ್ಬೂ ಅವರು ಕಡಲೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೇಲ್ ಮರವತ್ತೂರ್ ಸಮೀಪ ಅಪಘಾತ ಸಂಭವಿಸಿದೆ.

ಘಟನೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಖುಷ್ಬೂ ಅವರು, ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನಾನು ಪ್ರಯಾಣಿಸುತ್ತಿದ್ದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನನ್ನ ಪತಿ ನಂಬಿರುವ ದೇವರು ಮುರುಗನ್ ನಮ್ಮನ್ನು ಬದುಕಿಸಿದ ಎಂದು ಹೇಳಿಕೊಂಡಿದ್ದಾರೆ.

ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆಯಿತು ಎಂದು ತಿಳಿಸಿದ್ದಾರೆ.

No Comments

Leave A Comment