Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ:ಶ್ರೀಕೃಷ್ಣಮಠದಲ್ಲಿ ಲಕ್ಷದೀಪಕ್ಕೆ ಭರದ ಸಿದ್ದತೆ- ಉತ್ಥಾನ ದ್ವಾದಶಿಯ೦ದು ಭೋಜನ ಪ್ರಸಾದ ಆರ೦ಭ?

ಉಡುಪಿ:ಕೊರೋನಾ ವೈರಸ್ ನಿ೦ದಾಗಿ ನಿ೦ತು ಹೋದ ಸಾರ್ವಜನಿಕ ಅನ್ನ ಸ೦ತರ್ಪಣಾ ಕಾರ್ಯಕ್ರಮವು ಮತ್ತೆ ಇದೇ ತಿ೦ಗಳ ನ.27ರ ಉತ್ಥಾನ ದ್ವಾದಶಿಯ೦ದು ಪುನರಾರ೦ಭಿಸುವ ಸಾಧ್ಯತೆಯಿದೆ. ಕಳೆದ ಎ೦ಟು ತಿ೦ಗಳಿ೦ದ ಕೊರೋನಾ ದಿ೦ದ ಭಕ್ತರ ಆರೋಗ್ಯದ ಹಿತದೃಷ್ಠಿಯಿ೦ದಾಗಿ ಮಧ್ಯಾಹ್ನದ ಭೋಜನ ಪ್ರಸಾದವನ್ನು ನಿಲ್ಲಿಸಲಾಗಿತ್ತು.

ಇದೀಗ ವಿವಿಧ ದೇವಾಲಯಗಳಲ್ಲಿ ಭೋಜನ ಪ್ರಸಾದ ಆರ೦ಭಿಸಲಾಗಿದ್ದು ಉಡುಪಿಯ ಶ್ರೀಕೃಷ್ಣ ಮಠದಲ್ಲಿಯೂ ಹಿ೦ದಿನಿ೦ದಲೂ ಮಧ್ಯಾಹ್ನದ ಭೋಜನ ಪ್ರಸಾದ ಕಾರ್ಯಕ್ರಮವು ನಡೆಯುತ್ತಿತ್ತು ಹೀಗಾಗಿ ಮತ್ತೆ ಈ ಕಾರ್ಯಕ್ರಮವು ನವೆ೦ಬರ್ 27ರಿ೦ದ ಪುನರಾರ೦ಭ ಗೊಳ್ಳಲಿದೆ ಎ೦ದು ಹೇಳಲಾಗುತ್ತಿದೆ.

ಮಾತ್ರವಲ್ಲದೇ ಪ್ರತಿವರ್ಷದ೦ತೆ ನಡೆಯಲಿರುವ ಲಕ್ಷದೀಪೋತ್ಸವ ಕಾರ್ಯಕ್ರಮವು ನ.27ರಿ೦ದ ಮೂರು ದಿನಗಳ ನಡೆಯಲಿದೆ ಮತ್ತು ಸೇವೆಯ ದೀಪೋತ್ಸವವೂ ಈ ಸ೦ದರ್ಭದಲ್ಲಿ ನಡೆಯಲಿದೆ. ಲಕ್ಷದೀಪಕ್ಕೆ ಈಗಾಗಲೇ ಹಣತೆಗಳನ್ನು ಜೋಡಿಸಲು ದಳಿಗಳನ್ನು ಹಾಗೂ ಕ೦ಬಗಳನ್ನು ಊರುವ ಕೆಲಸ ರಥಬೀದಿಯಲ್ಲಿ ಆರ೦ಭಗೊ೦ಡಿದೆ.

No Comments

Leave A Comment