Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಬಾಂಗ್ಲಾದೇಶ ಸ್ಟಾರ್‌ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಗೆ ಕೊಲೆ ಬೆದರಿಕೆ

ನವದೆಹಲಿ: 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಗಮನಾರ್ಹ ಪ್ರದರ್ಶನ ತೋರಿದ್ದ ಬಾಂಗ್ಲಾದೇಶ ತಂಡದ ಸ್ಟಾರ್‌ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರಿಗೆ ತಮ್ಮದೇ ದೇಶದ ಯುವನೊಬ್ಬ ಫೇಸ್‌ಬುಕ್‌ ಲೈವ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ.

ಇತ್ತೀಚೆಗೆ ಶಕೀಬ್‌ ಅಲ್‌-ಹಸನ್‌ ಕೋಲ್ಕತ್ತಾಗೆ ಆಗಮಿಸಿ ಕಾಳಿ ಮಾತಾ ಪೂಜೆಯಲ್ಲಿ ಭಾಗಿಯಾಗಿದ್ದರು. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ಮೂಲಭೂತವಾದಿಗಳ ಒಂದು ವರ್ಗ ಅವರ ವಿರುದ್ಧ ಹಲವು ಬೆದರಿಕೆಗಳು ಹಾಕಿದ್ದರು. ಅಲ್ಲದೆ,  ಸಿಲ್ಹೆಟ್‌ನ ಶಹಪುರ್ ತಾಲ್ಲೂಕಿನ ಪ್ಯಾರಾ ನಿವಾಸಿ ಮೊಹ್ಸಿನ್ ತಾಲ್ಲೂಕ್ದರ್ ಎಂಬ ಯುವಕ ಭಾನುವಾರ ಮಧ್ಯಾಹ್ನ 12.06 ಕ್ಕೆ ಫೇಸ್‌ಬುಕ್ ಲೈವ್ ಪ್ರಾರಂಭಿಸಿದರು.

ಫೇಸ್‌ಬುಕ್ ಲೈವ್‌ನಲ್ಲಿ ಯುವಕ, ನೀವು(ಶಕೀಬ್‌) ಕೋಲ್ಕತಾ ಕಾಳಿ ಮಾತೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಮುಸ್ಲಿಂರ ಭಾವನೆಗಳಿಗೆ ದಕ್ಕೆ ತಂದಿದ್ದೀರಿ. ನಿಮ್ಮನ್ನು ಕತ್ತಿಯಿಂದ ತುಂಡು-ತುಂಡಾಗಿ ಕತ್ತರಿಸುತ್ತೇನೆ ಹಾಗೂ ಅಗತ್ಯವಿದ್ದರೆ, ಸಿಲ್ಹೆಟ್ ನಿಂದ ಢಾಕಾಗೆ ಬಂದು ಕತ್ತಿಯಿಂದ ಕೊಲ್ಲುವುದಾಗಿ ಶಕೀಬ್‌ಗೆ ಎಚ್ಚರಿಕೆ ನೀಡಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಕ್ರಿಕೆಟ್‌ನೆಕ್ಸ್ಟ್‌ನಲ್ಲಿ ಉಲ್ಲೇಖಿಸಿದಂತೆ, ಸಿಲ್ಹೆಟ್ ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಬಿ.ಎಂ. ಅಶ್ರಫ್ ಉಲ್ಲಾ ತಾಹೆರ್ ಅವರು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಈ ವಿಷಯದ ಬಗ್ಗೆ ಎಚ್ಚರಗೊಂಡಿದ್ದೇವೆ. ಯುವಕನ ಫೇಸ್‌ಲೈವ್‌ ವಿಡಿಯೋ ಲಿಂಕ್‌ ಅನ್ನು ಸೈಬರ್‌ ಬ್ರಾಂಚ್‌ಗೆ ನೀಡಿದ್ದೇವೆ. ಅತಿ ಶೀಘ್ರದಲ್ಲಿಯೇ ಕಾನೂನು ಕ್ರಮವನ್ನು ಜರುಗಿಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

No Comments

Leave A Comment