Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಶ್ರೀ ಕೃಷ್ಣ ಮಠದ ರಥಗಳ ಜೋಡಣೆಯ ಕೆಲಸಕ್ಕೆ ಚಾಲನೆ…

ಉಡುಪಿ: ನಿತ್ಯೋತ್ಸವದ ಬೀಡಾದ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಸಂಪ್ರದಾಯದಂತೆ ಭಾಗೀರತಿ ಜಯಂತಿಯಂದು ಉತ್ಸವ ಮೂರ್ತಿಯನ್ನು ಗರ್ಭಗುಡಿಯಲ್ಲಿರಿಸಿ ರಥೋತ್ಸವಗಳು ಕೊನೆಗೊಳ್ಳುತ್ತವೆ.

ಉತ್ಥಾನ ದ್ವಾದಶಿ ದಿನದಂದು ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರ ತಂದು ಮಹಾಪೂಜೆ ರಥ ಹಾಗೂ ಗರುಡ ರಥದಲ್ಲಿ ಉತ್ಸವ ಆರಂಭವಾಗಿ ನಿತ್ಯೋತ್ಸವ ನಡೆಯುತ್ತದೆ.ಮಕರ ಸಂಕ್ರಮಣದಂದು ಬೃಹತ್ ಹಾಗೂ ಸುಂದರವಾದ ಬ್ರಹ್ಮ ರಥ ಸೇರಿ 3 ರಥಗಳ ಉತ್ಸವ ನಡೆಯುತ್ತದೆ.

ಇದರ ಪೂರ್ವ ಭಾವಿಯಾಗಿ ರಥಗಳ ಜೋಡಣೆಯ ಕೆಲಸಗಳು ನಡೆಯುತ್ತಿದ್ದು,ರಥದ ಮರದ ಶಿಲ್ಪಗಳ (ಜಿಡ್ಡೆಯ) ಮೇಲ್ಬಾಗದಲ್ಲಿ ಬರುವ ವರ್ಣ ಚಿತ್ರಗಳು ಪುರುಷೋತ್ತಮ ಆಡ್ವೇ ಇವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದ್ದು, ತೈಲ ಕಲಾಚಿತ್ರಗಳನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅವಲೋಕಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್,ಕಲಾಗಾರರಾದ ಪುರುಷೋತ್ತಮ ಆಡ್ವೇ , ರೋಹಿತ್ ತಂತ್ರಿಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment