Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಶ್ವೇತಭವನ ಮುಖ್ಯಸ್ಥರಾಗಿ ರಾನ್ ಕ್ಲೈನ್!

ವಾಷಿಂಗ್ಟನ್: ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ರಾನ್ ಕ್ಲೈನ್ ​​ಅವರನ್ನು ಶ್ವೇತ ಭವನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.

ರಾನ್ ಕ್ಲೈನ್ ​​ ಅವರು, ಅಧ್ಯಕ್ಷರ ಕಾರ್ಯನಿರ್ವಾಹಕ ಕಚೇರಿಯ ಮೇಲ್ವಿಚಾರಣೆಯ ಜೊತೆಗೆ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಂತೆಯೇ, ಬೈಡೆನ್ ಜೊತೆಗೆ, ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಪ್ರಸ್ತುತ ದೇಶ ಎದುರಿಸುತ್ತಿರುವ ತುರ್ತು  ಸವಾಲುಗಳನ್ನು ಎದುರಿಸಲು ನೆರವಾಗುವಂತೆ ವೈವಿಧ್ಯಮಯ, ಅನುಭವಿ ಹಾಗೂ ಪ್ರತಿಭಾವಂತ ತಂಡದ ಆಯ್ಕೆಯಲ್ಲಿ ರಾನ್ ಕ್ಲೈನ್ ಶ್ರಮಿಸಲಿದ್ದಾರೆ.

ಕ್ಲೈನ್ ಅವರು ಬೈಡನ್ ಅವರ ​​ದೀರ್ಘಕಾಲದ ಸಹಾಯಕ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇನ್ನೂ ಬೈಡೆನ್ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ರಾನ್ ಕ್ಲೈನ್ ನಿಕಟವಾಗಿ ಕಾರ್ಯನಿರ್ವಹಿಸಿದ್ದರು. ಕ್ಲೈನ್ ​​ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್ ಚುನಾವಣಾ ಪ್ರಚಾರ  ಅಭಿಯಾನದ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು. ಬೈಡೆನ್ ಅವರು ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಚೀಫ್ ಆಫ್ ಸ್ಟಾಫ್ ಆಗಿ ಸೇವೆ ಸಲ್ಲಿಸಿದರು.

ಕ್ಲೈನ್ ​​ಅವರ ಆಯ್ಕೆಯ ಬಗ್ಗೆ ಬೈಡೆನ್ ಪ್ರತಿಕ್ರಿಯಿಸಿ, “ನಾವು ಒಟ್ಟಿಗೆ ಕೆಲಸ ಮಾಡಿದ ವರ್ಷಗಳಲ್ಲಿ ರಾನ್ ಕ್ಲೈನ್ ತಮ್ಮ ಅಮೂಲ್ಯವಾದ ವ್ಯಕ್ತಿ ಯಾಗಿದ್ದರು. 2009ರಲ್ಲಿ ಹಿಂಜರಿತದ ಸಮಯದಲ್ಲಿ ಅಮೆರಿಕಾ ಆರ್ಥಿಕ ವ್ಯವಸ್ಥೆಯನ್ನು ನಾವು ಸರಿದಾರಿಗೆ ತಂದಿದ್ದೆವು ಎಂದು ಹೇಳಿದ್ದಾರೆ.

No Comments

Leave A Comment