Log In
BREAKING NEWS >
ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲಾಗುವುದು ಎಂದು ನಾನು ಹೇಳಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ....

ಮೊದಲ ಚಿತ್ರ ‘ಅಭಿ’ ನೆನಪು ಮಾಡಿಕೊಂಡ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗ ತೊರೆದು ನಂತರ ರಾಜಕೀಯ ಕ್ಷೇತ್ರ ಸೇರಿದ ಮೇಲೆಯೂ ಸಿನಿಪ್ರೇಮಿಗಳಿಗೆ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ.ಕಳೆದೊಂದು ವರ್ಷದಿಂದ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದ ರಮ್ಯಾ ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಆಗಾಗ ಅಭಿಮಾನಿಗಳೊಂದಿಗೆ ತಮ್ಮಿಷ್ಟದ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟದ್ದು 2003ರಲ್ಲಿ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಅಭಿ ಚಿತ್ರದ ಮೂಲಕ. ಅದಾದ ನಂತರ ದಶಕದವರೆಗೆ ಸ್ಯಾಂಡಲ್ ವುಡ್ ನಲ್ಲಿ ರಾಣಿಯಾಗಿ ಮೆರೆದು ಹಲವು ಹಿಟ್ ಚಿತ್ರಗಳನ್ನು ನೀಡಿದರು.

ಚಿತ್ರರಂಗಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿದ್ದು ಅಭಿ ಚಿತ್ರದ ಆರಂಭವನ್ನು ರಮ್ಯಾ ನೆನಪು ಮಾಡಿಕೊಂಡಿದ್ದಾರೆ. ಅಭಿ ಚಿತ್ರಕ್ಕಾಗಿ ಮಾಡಿಕೊಂಡಿದ್ದ ಮೊದಲ ಫೋಟೋಶೂಟ್ ಫೋಟೋ ಹಂಚಿಕೊಂಡಿದ್ದಾರೆ.

No Comments

Leave A Comment