ಉಡುಪಿ: ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ದೇವಸ್ಥಾನದ ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಮಣಿಪಾಲ ಕೆಎಂಸಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಹಾಗೂ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಡಾ. ರವಿರಾಜ್ ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾದರು.
ನೂತನ ಸದಸ್ಯರಾಗಿ ನಾಗರಾಜ ಶೆಟ್ಟಿ ಕಡಿಯಾಳಿ, ಕೆ. ಮಂಜುನಾಥ ಹೆಬ್ಬಾರ್, ರಮೇಶ್ ಶೇರಿಗಾರ್ ಕುಂಜಿಬೆಟ್ಟು, ಕಿಶೋರ್ ಸಾಲ್ಯಾನ್ ಕಾತ್ಯಾಯನಿ ನಗರ, ಸಂಧ್ಯಾ ಪ್ರಭು, ಶಶಿಕಲಾ ಭರತ್, ಗಣೇಶ ನಾಯ್ಕ ಪಾಡಿಗಾರು ಮತ್ತು ಪ್ರಸ್ತುತ ಪಾಳಿಯಲ್ಲಿರುವ ಅರ್ಚಕ ಕೆ. ರಘುಪತಿ ಉಪಾಧ್ಯ ಆಯ್ಕೆಯಾದರು.
ದೇವಸ್ಥಾನದ ಆಡಳಿತಾಧಿಕಾರಿ ರವೀಂದ್ರ ಅಧಿಕಾರ ಹಸ್ತಾಂತರಿಸಿದರು.
ನೂತನ ಆಡಳಿತ ಮಂಡಳಿ ಸದಸ್ಯರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಂಜಿಬೆಟ್ಟು ವಾರ್ಡ್ ನಗರಸಭಾ ಸದಸ್ಯ ಗಿರೀಶ್ ಅಂಚನ್, ಕಡಿಯಾಳಿ ವಾರ್ಡ್ ಸದಸ್ಯೆ ಗೀತಾ ಶೇಟ್, ಧಾರ್ಮಿಕ ಪರಿಷತ್ ಉಡುಪಿ ಜಿಲ್ಲಾ ಸದಸ್ಯ ಮೋಹನ ಉಪಾಧ್ಯಾಯ, ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಮ್ಯಾನೇಜರ್ ಗಂಗಾಧರ ಹೆಗಡೆ ಇದ್ದರು.