Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ... ........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಬೆಂಗಳೂರಿನ ಹೊಟೇಲ್ ನಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟ, ಓರ್ವ ವಲಸೆ ಕಾರ್ಮಿಕನ ಸಾವು!

ಬೆಂಗಳೂರು: ಸಿಲಿಕಾನ್ ಸಿಟಿಯ ಹೊಟೆಲ್ ವೊಂದರಲ್ಲಿ ರೈಸ್ ಸ್ಟೀಮ್ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಹೊಟೇಲ್ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿರುವ ಹೊಟೆಲ್ ನಲ್ಲಿ ರೈಸ್ ಸ್ಟೀಮ್ ಕುಕ್ಕರ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಒಬ್ಬ ನೌಕರ ಮೃತಪಟ್ಟಿದ್ದು ಮತ್ತೊಬ್ಬ ನೌಕರ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತಪಟ್ಟಿರುವ ನೌಕರನನ್ನು ಅಸ್ಸಾಂ ಮೂಲದ ಮನೋಜ್ ಅಲಿಯಾಸ್ ಶಿವ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ನೌಕರರನ್ನು ಪ್ರದೀಪ್, ಮೋಹನ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಪೈಕಿ ಪ್ರದೀಪ್ ಸ್ಥಿತಿ ಕೂಡ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಿಚ್ಮಂಡ್ ವೃತ್ತದಲ್ಲಿರುವ ನ್ಯೂ ಉಡುಪಿ ಉಪಾಹಾರ್ ಹೊಟೆಲ್ ನಲ್ಲಿ ನಿನ್ನೆ ರಾತ್ರಿ ಸುಮಾರು 8.15ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಾತ್ರಿ ಊಟಕ್ಕಾಗಿ ಕಾರ್ಮಿಕರು ಅನ್ನ ಮಾಡುತ್ತಿದ್ದರು. ಈ ವೇಳೆ ಅನ್ನ ಮಾಡುವ ಸ್ಟೀಮರ್ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಸ್ಟೀಮರ್ ಸ್ಫೋಟಗೊಂಡ ವೇಳೆ ಸುಮಾರು 60 ಮಂದಿ ಗ್ರಾಹಕರಿದ್ದರು. ಸ್ಫೋಟವಾಗುತ್ತಿದ್ದಂತೆಯೇ ಎಲ್ಲರೂ ಹೊರಗೆ ಓಡಿ ಬಂದರು. ಕೂಡವೇ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದು, 2 ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿತು. ಈ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

No Comments

Leave A Comment