ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟಕ್ಕೆ ಬಿ. ಮಧುಸೂದನ ನಾಯಕ್ ಅವಿರೋಧ ಆಯ್ಕೆ ಉಡುಪಿ: ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈಚೆಗೆ ನಡೆಯಿತು. ಅಧ್ಯಕ್ಷರಾಗಿ ಬಿ. ಭಾಸ್ಕರ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ಬಿ. ಮಧುಸೂದನ ನಾಯಕ್ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಮಂಜುನಾಥ ಎಸ್. ಕೆ., ಗಿರೀಶ್ ಪೈ ಬಿ., ಎಂ. ವಿನಾಯಕ ರಾವ್, ವಿಜಯ ಕೆ., ಬಿ. ಸದಾಶಿವ ಶೆಟ್ಟಿ, ಸುಧೀಶ್ ನಾಯಕ್, ಸುಧಾಕರ್ ಕೆ. ಮೂಳೂರು, ವಿವೇಕ್. ಯು., ಬಿ. ಎಚ್. ಶೆಟ್ಟಿಗಾರ್, ರಾಜೀವ್ ಕೋಟ್ಯಾನ್, ಅಶೋಕ್ ಪ್ರಭು, ನೇಮಿರಾಜ ಆರಿಗ ಮತ್ತು ಪಿ. ಜಗನ್ನಾಥ ಶೆಟ್ಟಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಲಕ್ಷ್ಮೀನಾರಾಯಣ ಆರ್. ನಾಯ್ಕ್ ಸಹಕರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಜಿ. ಸಾಲಿಯನ್ ಇದ್ದರು. Share this:TweetWhatsAppEmailPrintTelegram