Log In
BREAKING NEWS >
ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲಾಗುವುದು ಎಂದು ನಾನು ಹೇಳಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ....

ಮಂಗಳೂರು: ಶಾರದೆ ಫೋಟೋ ಶೂಟ್‌ಗಾಗಿ 21 ದಿನಗಳ ವೃತಾಚರಿಸಿದ ಕ್ರೈಸ್ತ ಯುವತಿ

ಮಂಗಳೂರು:ಕೊರೊನಾ ಸಂದರ್ಭದ ದಸರಾ ಸಂಭ್ರಮದಲ್ಲಿ ಆನ್‌ಲೈನ್‌ನಲ್ಲಿ ಹಲವು ಸ್ಪರ್ಧೆಗಳು ನಡೆದಿದ್ದು ಹಲವು ಮಂದಿಯ ನವದೇವಿಯರ ಫೋಟೋ ಶೂಟ್‌ಗಳು ವೈರಲ್‌ ಆಗಿದ್ದವು. ಈ ನಡುವೆ ನಗರದ ಕ್ರೈಸ್ತ ಯುವತಿಯೋರ್ವರು ಶಾರದೆ ಫೋಟೋಶೂಟ್‌ ಮಾಡಿಸಿಕೊಂಡಿದ್ದು ಅದಕ್ಕಾಗಿ 21 ದಿನಗಳ ಕಾಲ ವೃತವನ್ನು ಆಚರಿಸಿದ್ದಾರೆ.

ಇತ್ತೀಚೆಗೆ ನವದೇವಿಯರ ಫೋಟೋ ಶೂಟ್‌ ಮಾಡಿಸಲಾಗುತ್ತಿದ್ದು ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು ಕೂಡಾ ಇದೆ. ಏತನ್ಮಧ್ಯೆ ಶಾರದೆ ಫೋಟೋ ಶೂಟ್‌ ಒಂದಕ್ಕೆ ಆಯ್ಕೆಯಾಗಿದ್ದ ನಗರದ ಅನಿಶಾ ಅಂಜಲಿನಾ ಮೊಂತೆರೊ ಎಂಬ ರೂಪದರ್ಶಿ ಈ ಎಲ್ಲಾ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ 21 ದಿನಗಳ ಕಾಲ ವೃತವನ್ನು ಆಚರಿಸಿ ಶಾರದೆ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ.

ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗದಂತೆ ಕ್ರೈಸ್ತ ಯುವತಿ ವೃತಾಚರಿಸಿ ಶಾರದೆ ಫೋಟೋಶೂಟ್‌ ಮಾಡಿಸಿಕೊಂಡ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಶ್ಲಾಘಿಸಿದ್ದಾರೆ. ಇದೀಗ ಅನಿಶಾ ಅಂಜಲಿನಾರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಶಾ ಅಂಜಲಿನಾ, ”ನನ್ನನ್ನು ಶಾರದೆ ಫೋಟೋ ಶೂಟ್‌ಗೆ ಆಯ್ಕೆ ಮಾಡಲಾಗಿತ್ತು. ಒಂದೆಡೆ ಆತಂಕ ಉಂಟಾಗಿತ್ತು. ನಾನು ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ 21 ದಿನಗಳ ಕಾಲ ವೃತ ಆಚರಿಸಿ ಫೋಟೋ ಶೂಟ್‌ ಮಾಡಿಸಿಕೊಂಡೆ” ಎಂದು ತಿಳಿಸಿದ್ದಾರೆ.

No Comments

Leave A Comment