Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ಚಂಡಿಕಾಯಾಗ ಸ೦ಪನ್ನ…

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ ನವರಾತ್ರಿಯ ವಿಜಯದಶಮಿ ಪ್ರಯುಕ್ತ ಶ್ರೀ ದೇವರ ಸನ್ನಿದಿಯಲ್ಲಿ ವೇದ ಮೂರ್ತಿ ವಿನಾಯಕ ಭಟ್ ನೇತೃತ್ವದಲ್ಲಿ ಚಂಡಿಕಾಯಾಗದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯೊ೦ದಿಗೆ ಕುಂಕುಮ ಅರ್ಚನೆ , ,ಯಜ್ಞಾ ಮಂಟಪ ದಲ್ಲಿ ಅಗ್ನಿ ಪ್ರತಿಷ್ಠಾಸ್ಥಾಪನೆ , ಆಡಳಿತ ಮಂಡಳಿಯ ಸದಸ್ಯರಾದ ಗಣೇಶ ಕಿಣಿ ದಂಪತಿಗಳು ಚಂಡಿಕಾ ಯಾಗದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಕಾರ್ಯಕ್ರಾಮದಲ್ಲಿ ದಲ್ಲಿ ಮಧುಕರ ಭಟ್ , ದೀಪಕ್ ಭಟ್ ,ಸುರೇಶ ಭಟ್ ,ಲಕ್ಷೀನಾರಾಯಣ ಭಟ್ ,ಹಾಗೂ ವೈದಿಕರು ಯಾಗದ ಪೂರ್ಣಾಹುತಿ ನೆಡೆಸಿ ಮಂಗಳಾರತಿ ಬೆಳಗಿಸಿದರು. ಕುಮಾರಿ ಪೂಜೆ ,ಸುಹಾಸಿನಿ ಪೂಜೆ , ಶ್ರೀ ಶಾರದಾ ದೇವಿಯ ಸೀರೆಗಳ ಏಲಂ,ಅನ್ನಸಂತರ್ಪಣೆ ನೆಡೆಯಿತು .

ದೇವಳದ ಧರ್ಮದರ್ಶಿ ಪಿ ವಿ ಶೆಣೈ , ವಿಶ್ವನಾಥ ಭಟ್ , ಮಟ್ಟಾರ್ ವಸಂತ್ ಕಿಣಿ , ರೋಹಿತಾಕ್ಷ ಪಡಿಯಾರ , ಪುಂಡಲೀಕ ಕಾಮತ್ , ಕೈಲಾಶನಾಥ್ ಶೆಣೈ , ದೇವದಾಸ್ ಪೈ , ಅಶೋಕ ಬಾಳಿಗಾ , ಉಮೇಶ ಪೈ, ಸುರೇಶ ನಾಯಕ್ ,ಶಾಂತಾರಾಮ್ ಶಾನಭಾಗ್ ಟಿ. ಸುಬ್ರಮಣ್ಯ ಪೈ ಮತ್ತು ಜಿ.ಎಸ.ಬಿ ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ ಸದಸ್ಯರು ಸೇರಿದ೦ತೆ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment