Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮೈಸೂರು ದಸರಾ 2020: ಕೊರೋನಾ ಎಫೆಕ್ಟ್ ನಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ 2 ಸ್ಥಬ್ಧಚಿತ್ರಕ್ಕೆ ಅವಕಾಶ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊರೋನಾ ಸಾಂಕ್ರಾಮಿಕದ ನಡುವೆ ನಡೆಯುತ್ತಿರುವ ಸರಳ ದಸರಾದಲ್ಲಿ ಈ ಬಾರಿ ಕೇವಲ 2 ಸ್ಥಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಹೌದು.. ಕೊರೊನಾ ಹಿನ್ನೆಲೆಯಲ್ಲಿ ‌ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಕೇವಲ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ಧಚಿತ್ರಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗಿದೆ. ಈ ಎರಡು ಸ್ಥಬ್ಧ ಚಿತ್ರಗಳ ಪೈಕಿ ಮೈಸೂರು  ಜಿಲ್ಲಾ ಪಂಚಾಯತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಒಂದಾಗಿದ್ದು, ಮಹಾಮಾರಿ ಕೊರೊನಾವನ್ನು ತಡೆಯಲು ಕೊರೊನಾ ವಾರಿಯರ್ಸ್​ಗಳ ಪಾತ್ರ ಅತಿ ಮುಖ್ಯ ಹೀಗಾಗಿ ಈ ಸ್ತಬ್ಧಚಿತ್ರವನ್ನು ಅವರಿಗಾಗಿ ಅರ್ಪಿಸಲಾಗಿದೆ. ಅಂತೆಯೇ ಇಡೀ ವಿಶ್ವ, ಕುಟುಂಬವನ್ನು ವೈದ್ಯರು ಕಾಪಾಡುತ್ತಿದ್ದಾರೆ ಎಂದು  ಸಾರುವ ಚಿತ್ರ ಇದಾಗಿದೆ.

ಇನ್ನು ಮತ್ತೊಂದು ವಿಶೇಷ ಅಂದ್ರೆ ಅದು ಅರಮನೆ ವಾದ್ಯಗೋಷ್ಠಿಯ ನಿರ್ಮಾಣ ಮಾಡಲಾಗಿದೆ. ಇದನ್ನು ಆನೆ ಬಂಡಿ ಸ್ತಬ್ಧಚಿತ್ರ ಎನ್ನಲಾಗುತ್ತೆ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರೆವಣೆಗೆಯಲ್ಲಿ ಭಾಗವಹಿಸಲಿವೆ.

No Comments

Leave A Comment