Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ... ........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ವಿಮಾನದಲ್ಲಿ ಪ್ರತಿಕ್ರಿಯೆಗಾಗಿ ಕಂಗನಾ ಬೆನ್ನು ಬಿದ್ದ ಮಾಧ್ಯಮಗಳು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದ ಇಂಡಿಗೋ ಸಂಸ್ಥೆ!

ನವದೆಹಲಿ: ವಿಮಾನದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ರ ಪ್ರತಿಕ್ರಿಯೆಗಾಗಿ ಮುಗಿಬಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಶಾಕ್ ನೀಡಿದ್ದು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದೆ.

ಹೌದು.. ಕಳೆದ ಸೆಪ್ಟೆಂಬರ್ 9ರಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಟಿ ಕಂಗನಾ ರಣಾವತ್ ರ ಪ್ರತಿಕ್ರಿಯೆಗಾಗಿ ಕ್ಯಾಮೆರಾಗಳ ಸಹಿತ ವಿಮಾನದೊಳಗೆ ಪ್ರವೇಶಿ ಕಾನೂನು ಬಾಹಿರವಾಗಿ ನಡೆದುಕೊಂಡ 9 ಮಂದಿ ಪತ್ರಕರ್ತರ ವಿಮಾನ ಪ್ರಯಾಣಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ 15 ದಿನಗಳ ತಾತ್ಕಾಲಿಕ  ನಿಷೇಧ ಹೇರಿದೆ.

ಕಳೆದ ಸೆಪ್ಟೆಂಬರ್ 9ರಂದು ಇಂಡಿಗೋ ವಿಮಾನ ಸಂಖ್ಯೆ 6E-264ನಲ್ಲಿ ನಟಿ ಕಂಗಾನ ಚಂಡೀಗಢದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳು ವಿಮಾನದಲ್ಲಿಯೇ ಅವರ ಪ್ರತಿಕ್ರಿಯೆಗಾಗಿ ದುಂಬಾಲು ಬಿದ್ದರು. ಈ ಘಟನೆಯನ್ನು ಡೈರೆಕ್ಟರೇಟ್ ಜನರಲ್ ಆಫ್  ಸಿವಿಲ್ ಏವಿಯೇಷನ್(ಡಿಜಿಸಿಎ) ಗಂಭೀರವಾಗಿ ಪರಿಗಣಿಸಿತ್ತು. ವಿಮಾನದಲ್ಲಿ ಯಾರಾದರೂ ಛಾಯಾಗ್ರಹಣ ಮಾಡುತ್ತಿರುವುದು ಕಂಡುಬಂದರೆ ಎರಡು ವಾರಗಳ ಅವಧಿಗೆ ನಿಗದಿತ ವಿಮಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಅಲ್ಲದೆ ನಿಯಮ ಮೀರಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಂಡಿಗೋ ವಿಮಾನಯಾನ ಸಂಸ್ಥೆಗೆ ಸೂಚಿಸಿತ್ತು. ಡಿಜಿಸಿಎ ನಿರ್ದೇಶನದ ಅನ್ವಯ ಕ್ರಮ ಕೈಗೊಂಡಿರುವ ಇಂಡಿಗೋ ವಿಮಾನಯಾನ ಸಂಸ್ಥೆ 9 ಮಂದಿ ಪತ್ರಪರ್ತರನ್ನು ತನ್ನ ವಿಮಾನ ಪ್ರಯಾಣದಿಂದ 15 ದಿನಗಳ ಕಾಲ ನಿಷೇಧ ಹೇರಿದೆ.

No Comments

Leave A Comment