Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಸಾವರ್ಕರ್ ರೀತಿ ನನ್ನನ್ನು ಜೈಲಿನಲ್ಲಿರಿಸಲು ಸರ್ಕಾರ ಯತ್ನಿಸುತ್ತಿದೆ: ಕಂಗನಾ ರಣಾವತ್

ಮುಂಬಯಿ: ನನ್ನ ವಿರುದ್ಧ ದೂರು ದಾಖಲಿಸಿರುವ ಸರ್ಕಾರ ನನ್ನನ್ನು ಜೈಲಿನಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ಸೌಹಾರ್ದ ಕದಡಿದ ಆರೋಪದಡಿ ಬಾಲಿವುಡ್ ಸೆಲೆಬ್ರಿಟಿ ಸಹೋದರಿಯರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಕಂಗನಾ ಸರ್ಕಾರ ತಮ್ಮನ್ನು ಜೈಲಿನಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.

ನೇತಾ ಬೋಸ್, ಸಾವರ್ಕರ್ ಮತ್ತು ಝಾನ್ಸಿ ರಾಣಿಯಂತೆ ನಾನು ನನ್ನ ಕಾಯಕ ಮಾಡುತ್ತಿದ್ದೇನೆ, ಇಂದು ಸರ್ಕಾರವು ನನ್ನನ್ನು ಜೈಲಿಗೆ ಹಾಕಲು ಪ್ರಯತ್ನಿಸುತ್ತಿದೆ, ಅದು ನನ್ನ ಆಯ್ಕೆಗಳ ಬಗ್ಗೆ ನನಗೆ ವಿಶ್ವಾಸವನ್ನುಂಟುಮಾಡುತ್ತದೆ, ಶೀಘ್ರದಲ್ಲೇ ಜೈಲಿನಲ್ಲಿರಲು ಕಾಯುತ್ತಿದ್ದೇನೆ, ಇದು ನನ್ನ ಜೀವನಕ್ಕೆ ಅರ್ಥ ನೀಡುತ್ತದೆ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಆಲೀ ಕಾಸಿಫ್ ಖಾನ್ ದೇಶ್ ಮುಖ್ ಪ್ರಕರಣ ದಾಖಲಿಸಿದ್ದು, ಕಂಗನಾ ರಣಾವತ್ ದೇಶದ್ರೋಹವೆಸಗಿದ್ದಾರೆ ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಣಿ ಲಕ್ಷ್ಮಿ ಬಾಯಿ ಅವರ ಕೋಟೆಯನ್ನು ಮುರಿಯಲಾಯಿತು, ಅದರಂತೆ ನನ್ನ ಮನೆಯನ್ನು ಧ್ವಂಸ ಮಾಡಲಾಗಿದೆ,  ಸಾವರ್ಕರ್ ರನ್ನು ಜೈಲಿನಲ್ಲಿಡಲಾಗಿತ್ತು.  ನನ್ನನ್ನು ಕೂಡ ಜೈಲಿನಲ್ಲಿರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಟ್ಟೀಟ್ ಮಾಡಿ ನಟ ಅಮೀರ್ ಖಾನ್ ಗೆ ಟ್ಯಾಗ್ ಮಾಡಿದ್ದಾರೆ.

No Comments

Leave A Comment