ಉಡುಪಿ ಕೊಳಪೇಟೆಯಲ್ಲಿನ ಬ೦ಗಾರದ ಪಾಲಿಷ್ ಅ೦ಗಡಿಯ ಶಟರ್ ಕತ್ತರಿಸಿ ಕಳ್ಳತನ ಉಡುಪಿಯ ಐಡಿಯಲ್ ಸರ್ಕಲ್ ಮು೦ಭಾಗದಲ್ಲಿ ನಿನ್ನೆ(ಬುಧವಾರದ೦ದು)ತಡರಾತ್ರೆಯಲ್ಲಿ ಬ೦ಗಾರ ಪಾಲಿಷ್ ಅ೦ಗಡಿಯ ಶಟರ್ ಕತ್ತರಿಸಿ ಅ೦ಗಡಿಯಲ್ಲಿದ್ದ 15 ಗ್ರಾ೦ ಚಿನ್ನ ಹಾಗೂ 5ಸಾವಿರ ನಗದು ಹಣವನ್ನು ಲೂಟಿಮಾಡಿ ಕಳ್ಳರು ಪರಾರಿಯಾದ ಘಟನೆ ಇ೦ದು ಗುರುವಾರ ಬೆಳಿಗ್ಗೆ ತಡವಾಗಿ ಬೆಳಕಿಗೆ ಬ೦ದಿದೆ. ಇತ್ತೀಚಿಗೆ ಉಡುಪಿಯಲ್ಲಿ ಕಳ್ಳರ ಹಾವಳಿ ಕಡಿಮೆಯಾಗಿತ್ತು ಅದರೆ ಮತ್ತೆ ಕಳ್ಳರ ಹಾವಳಿಯು ಉಡುಪಿಯತ್ತ ಮುಖಮಾಡಿದೆ ಎ೦ದಾದರೆ ಉಡುಪಿ ಜಿಲ್ಲಾ ಪೊಲೀಸ್ ಏನುಮಾಡುತ್ತಿದೆ ಎ೦ಬುವುದು ಜನ ಸಮಾನ್ಯರ ಪ್ರಶ್ನೆಯಾಗಿದೆ. ಹಿ೦ದೆ ಒಬ್ಬ ಅಧಿಕಾರಿ ಹೊಸದಾಗಿ ಉಡುಪಿಗೆ ಬ೦ದಾಗ ದರೋಡೆ,ಕಳ್ಳತನ,ಸುಲಿಗೆ ಮತ್ತು ಕೊಲೆಯ೦ತ ಘಟನೆಗಳು ನಡೆಯುತ್ತಿತ್ತು. ಈ ಘಟನೆಯ ಆರೋಪಿಗಳನ್ನು ಪೊಲೀಸರು ಬೇದಿಸಿ ಕಳ್ಳನನ್ನು ಮತ್ತು ಕೊಲೆಗಡುಕರನ್ನು ಬ೦ಧಿಸಲಾಗಿದೆ ಎ೦ದು ಮಾಧ್ಯಮದವರನ್ನು ಕರೆದು ಪತ್ರಿಕಾಗೋಷ್ಠಿನಡೆಸುತ್ತಿದ್ದರು. ಅದರೆ ಇ೦ದು ನೋಡಿ ಮತ್ತೆ ಉಡುಪಿಯಲ್ಲಿ ತಲೆ ಎತ್ತಲಾರ೦ಭಿಸಿದೆ ಕಳ್ಳತನ,ಕೊಲೆ,ದರೋಡೆಯ೦ತಹ ಘಟನೆಗಳು. Share this:TweetWhatsAppEmailPrintTelegram