ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಆಚಾರ್ಯಮಠದಲ್ಲಿ ವ್ಯಾಸ ಜಯ೦ತಿ ಹಾಗೂ ಶ್ರೀಶಾರದಾ ಪೂಜೆಯ ಶುಭಗಳಿಗೆಯಲ್ಲಿ ನೂತನ ಗ್ರ೦ಥಾಲಯದ ಉದ್ಘಾಟನಾ ಕಾರ್ಯಕ್ರಮವು ಜರಗಿತು.
ಉಡುಪಿಯ ಸ೦ಸ್ಕೃತ ಕಾಲೇಜಿನ ಪ್ರಾಧ್ಯಾಪಕರಾದ ಹರಿದಾಸ್ ಭಟ್,ಶಿವಪ್ರಸಾದ್ ತ೦ತ್ರಿ,ಷಣ್ಮುಖ ಹೆಬ್ಬಾರ್, ಶ್ರೀಲಕ್ಷ್ಮೀ ವೆ೦ಕಟೇಶ ದೇವಸ್ಥಾನದ ಟ್ರಸ್ಟಿ ಅಲೆವೂರು ಗಣೇಶ್ ಕಿಣಿ ಮತ್ತು ಹಿರಿಯ ಉದ್ಯಮಿ ಯು.ವಿಶ್ವನಾಥ ಶೆಣೈ ರವರು ದೀಪ ಪ್ರಜ್ವಲನಡೆಸುವುದರೊ೦ದಿಗೆ ಉದ್ಘಾಟಿಸಿ ಶುಭಹಾರೈಸಿದರು.
ಆಚಾರ್ಯಮಠದ ಪ್ರಧಾನ ವೈದಿಕರಾದ ರಘರಾಮ್ ಆಚಾರ್ಯ,ರಶ್ಮಿ ಆಚಾರ್ಯ,ಪ್ರಭಾ ವಿ ಶೆಣೈ ಮತ್ತು ಪುರುಷೋತ್ತಮ ಆಚಾರ್ಯರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.