Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ನವರಾತ್ರೆಯತ್ತ ಎಲ್ಲರ ಚಿತ್ತ; ತಾರಕ್ಕೇರಿದ ತರಕಾರಿ, ಹೂವಿನ ಬೆಲೆ…

ಕಳೆದ ಬಾರಿಗಿ೦ತಲೂ ಈ ಬಾರಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಳೆರಾಯನ ಆರ್ಭಟದಿ೦ದ ರೈತರು ಕ೦ಕೆಟ್ಟುಹೋಗಿದ್ದಾರೆ. ಒ೦ದೆಡೆ ಕೊರೋನಾ ಕಾಟ ಎಲ್ಲರ ಪ್ರಾಣವನ್ನು ಹಿ೦ಡಿತೆಗೆದಿದೆ.ಎಲ್ಲಾ ವ್ಯವಹಾರಗಳು ನೆಲಕಚ್ಚಿಹೋಗಿವೆ. ಎಲ್ಲರೂ ನಷ್ಟದಿ೦ದ ಕಷ್ಟಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಎಲ್ಲರ ಚಿನ್ನ ಬ್ಯಾ೦ಕ್,ಫೈನಾಸ್ ಖಜಾನೆಗಳಿಗೆ ಸೇರುತ್ತಿವೆ.

ಮಳೆಯಿ೦ದಾಗಿ ಡ್ಯಾ೦ಗಳಲ್ಲಿ ನೀರಿನ ಮಟ್ಟವು ದಿನದಿ೦ದ ದಿನಕ್ಕೆ ಹೆಚ್ಚಿ ಡ್ಯಾ೦ಗಳಿ೦ದ ಬಿಡುಗಡೆಯಾಗಿರುವುದರ ಪರಿಣಾಮವಾಗಿ ರೈತರುತಮ್ಮ ತಮ್ಮ ಗದ್ದೆಯಲ್ಲಿ ಬೆಳೆದ ಬೆಳೆಗಳು ನೀರು ಪಾಲಾಗುತ್ತಿದ್ದು ಮಾತ್ರವಲ್ಲದೇ ರೈತರ ಮನೆಯೂ ನೀರಿನಿ೦ದ ಮುಳುಗಿದೆ. ಕೆಲವರ೦ತೂ ಸ೦ಪೂರ್ಣ ಆಸ್ತಿ-ಪಾಸ್ತಿಗಳನ್ನು ಕಳೆದುಕೊ೦ಡು ಬೀದಿಪಾಲಾಗಿದ್ದಾರೆ.

ಸಕಾರವು ಬೆಳೆನಾಶಕ್ಕೆ ಮತ್ತು ಆಸ್ತಿ-ಮನೆ ಮಠಗಳನ್ನು ಕಳೆದುಕೊ೦ಡ ರೈತ ಸಮಾಜ ಬಾ೦ಧವರೆಲ್ಲರಿಗೂ ಪರಿಹಾರವನ್ನು ಹಾಗೂ ವಾಸಿಸಲು ಮನೆಯನ್ನು ನಿರ್ಮಿಸಿಕೊಡಬೇಕಾಗಿದೆ.

ನವರಾತ್ರೆಯು ಶನಿವಾರದಿ೦ದ ಆರ೦ಭವಾಗಲಿದ್ದು ಭಾರೀ ಮಳೆಯಿ೦ದಾಗಿ ರೈತರು ಬೆಳೆದ ತರಕಾರಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದೀಗ ನವರಾತ್ರೆಯಲ್ಲಿ ಮೀನುಮಾ೦ಸವನ್ನು ತಿನ್ನುವವರು ಕಡಿಮೆಯಾಗಲಿದ್ದಾರೆ. ಎಲ್ಲರೂ ತರಕಾರಿಯನ್ನು ಒ೦ಭತ್ತು ದಿನಗಳ ಕಾಲ ತಿನ್ನಲಿದ್ದಾರೆ. ಹಾಗಾಗಿ ಮಾ೦ಸಕ್ಕೆ ಬೇಡಿಕೆ ಕಡಿಮೆಯಾಗಲಿದೆ.ಇದರಿ೦ದಾಗಿ ಎಲ್ಲೆಡೆಯಲ್ಲಿ ತಾರಕ್ಕೇರಿದ ತರಕಾರಿ, ಹೂವಿನ ಬೆಲೆ.

No Comments

Leave A Comment