Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಬಾತ್‌ರೂಂನಲ್ಲಿ ಮಗುವಿಗೆ ಜನ್ಮವಿತ್ತು ಹೊರಕ್ಕೆಸೆದಳು!-ಭಾರತದ ಮೂಲದ ಮಹಿಳೆಯ ಕೃತ್ಯ

ನ್ಯೂಯಾರ್ಕ್‌: ಭಾರತೀಯ ಮೂಲದ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಮಗುವಿಗೆ ಜನ್ಮ ನೀಡಿ, ಅನಂತರ ಆ ಮಗುವನ್ನು ಬಾತ್‌ರೂಮಿನ ಕಿಟಕಿಯಿಂದ ಹೊರಕ್ಕೆಸೆದ ಭಯಾನಕ ಘಟನೆ ವರದಿಯಾಗಿದೆ. ನ್ಯೂಯಾರ್ಕ್‌ನ ಕ್ವೀನ್ಸ್‌ನ ನಿವಾಸಿಯಾಗಿ ರುವ 23 ವರ್ಷದ ಸಬಿತಾ ಡೂಕ್ರಮ್‌ ವಿರುದ್ಧ ಪೊಲೀ ಸರು ಈಗ ಕೊಲೆಯತ್ನದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ತಾನು ಸ್ನಾನ ಮಾಡುವಾಗ ಹೆರಿಗೆಯಾ ಗಿದ್ದು, ಗಾಬರಿಗೊಂಡು ಈ ಕೃತ್ಯ ಎಸಗಿದ್ದಾಗಿ ಸಬಿತಾ ಹೇಳುತ್ತಿದ್ದಾಳೆ. ಮಗುವನ್ನು ಕಿಟಕಿಯಿಂದ ಹೊರಕ್ಕೆಸೆದೆ ಅನಂತರ ಆಕೆ ಬಾತ್‌ರೂಮನ್ನು ಸ್ವಚ್ಛಗೊಳಿಸಿ, ಅನಂತರ ಕೆಲವು ಕಾಲ ನಿದ್ದೆಯೂ ಮಾಡಿದ್ದಳಂತೆ!

ತೀವ್ರವಾಗಿ ಗಾಯಗೊಂಡಿದ್ದ ಮಗುವಿನ ಅಳು ನೆರೆಯ ಮನೆಯ ವರಿಗೆ ಕೇಳಿಸಿದ್ದು, ಅವರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೆಳಕ್ಕೆ ಬಿದ್ದ ರಭಸಕ್ಕೆ ಮಗುವಿನ ಮೆದು ಳಲ್ಲಿ ರಕ್ತ ಸೋರಿದ್ದು, ಮೂಳೆಯೂ ಮುರಿದಿದೆ.

No Comments

Leave A Comment