ಮರೆತು ಬಿಟ್ಟು ಹೋಗಿದ್ದ ಮಹಿಳೆಯ ಹಣವನ್ನು ಮರಳಿಸಿದ ಆಟೋ ಚಾಲಕ..!
ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿ ಬಳಿ ಆಟೋರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ಕುರ್ಕಾಲಿನ ಮಹಿಳೆಯ 50ಸಾವಿರ ರೂಪಾಯಿ ಮರಳಿಸಿ ಮಾನವೀಯತೆ ಮೆರೆದ ಆಟೋರಿಕ್ಷಾ ಚಾಲಕ ಮಾನವೀಯತೆ ಮೆರೆದಿದ್ದಾನೆ.
ಅಂಬಲಪಾಡಿ ಜಯ ಶೆಟ್ಟಿ ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಮಹಿಳೆಯನ್ನು ಬಸ್ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದರು. ತೆರೆದಾಗ ಅದರಲ್ಲಿ 50ಸಾವಿರ ಹಣವಿತ್ತು.
ಆ ಕೂಡಲೇ ಉಡುಪಿಯಿಂದ ಕಟಪಾಡಿಗೆ ಬಂದು ಕುರ್ಕಾಲಿನ ಮಹಿಳೆಯನ್ನು ಸಂಪರ್ಕಿಸಿ, 50ಸಾವಿರ ರೂಪಾಯಿ ಹಣವನ್ನು ಮರಳಿಸಿ ಮಾನವೀಯತೆ ಮೆರೆದರು. ಆಟೋ ರಿಕ್ಷಾ ಚಾಲಕರ ಮಾನವೀಯ ಗುಣವನ್ನು ಹಾಗೂ ಅವರು ಮಾಡಿದ ಉಪಕಾರವನ್ನು ಮಹಿಳೆ ಹಾಗೂ ಕಟಪಾಡಿಯ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕ ಜಯ ಶೆಟ್ಟಿ ಅವರ ಈ ಕೆಲಸ ಇತರರಿಗೆ ಮಾದರಿಯೆನಿಸಿದೆ.