Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಏನಾದರೂ ಛಲ ಬಿಡಬೇಡಿ, ಶಿಕ್ಷಣವು ನಿಮಗೆ ರೆಕ್ಕೆಗಳನ್ನು ನೀಡುತ್ತದೆ ಎಂದ ‘ಶಾಸ್ತ್ರಿ’ ಚೆಲುವೆ ಮಾನ್ಯ

ಬಹುಭಾಷಾ ನಟಿ ದರ್ಶನ್ ಶಾಸ್ತ್ರಿ ಖ್ಯಾತಿಯ ಮಾನ್ಯ ತಮ್ಮ ಬದುಕಿನ ಸಂಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಶಾಲೆ ಮೆಟ್ಟಿಲೇರಿದಾಗ ಬಿಕ್ಕಿ ಬಿಕ್ಕಿ ಅತ್ತದ್ದನ್ನು, ತಮಗಿದ್ದ ವೈಯುಕ್ತಿಕ ಆರೋಗ್ಯ ಸಮಸ್ಯೆಗಳ ಬಗೆಗೆ ಅವರು ಸಾಮಾಜಿಕ ತಾಣ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ನನಗೆ ದೇವರ ಮೇಲೆ ನಂಬಿಕೆ ಇತ್ತು, ಏನಾದರೂ ನಾನೇ ಸಮಾಧಾನ ಪಟ್ಟುಕೊಂಡು ಪುಟಿದೇಳುತ್ತಿದ್ದೆ. ಏನೇ ಬಂದರೂ ಛಲ ಬಿಡಬೇಡಿ ಎಂದು ಮಾನ್ಯ ಹೇಳಿದ್ದಾರೆ.

ಶಿಕ್ಷಣವು ನಿಮಗೆ ಆಗಸದಲ್ಲಿ ಹಾರಲು ರೆಕ್ಕೆಗಳನ್ನು ನೀಡುತ್ತದೆ ಎಂದು ನಟಿ ಹೇಳಿದ್ದಾರೆ. ಜತೆಗೆ ನನ್ನ ಈ ಪೋಸ್ಟ್ ವೈರಲ್ ಆಗಲೆಂದು ಬಯಸುವುದಾಗಿಯೂ ಹೇಳಿದ್ದಾರೆ.

“ನಾನು ಚಿಕ್ಕವಳಿದ್ದಾಗ ತಂದೆ ನಿಧನರಾದರು, ಹಸಿವಿನ ಅನುಭವ ಸಹ ನನಗಿದೆ. ಕಷ್ಟಪಟ್ಟು  41 ಚಿತ್ರಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿ ಆ ಹಣವನ್ನು ಅಮ್ಮನಿಗೆ ಕೊಟ್ಟು ನಾನು ಓದಲು ತೊಡಗಿದೆ. ಹಾಗೆ ಓದಿ ಸ್ಯಾಟ್ ಎಕ್ಸಾಮ್ ಬರೆದೆನಲ್ಲದೆ ನ್ಯೂಯಾರ್ಕ್‍ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡೆ” ನಟಿ ವಿವರಿಸಿದ್ದಾರೆ.

No Comments

Leave A Comment