Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ​ಹೆಸರಿನಲ್ಲಿ ಬರೋಬ್ಬರಿ 13.5 ಲಕ್ಷ ರೂಪಾಯಿ ಪಡೆದು ಪರಾರಿಯಾಗಿರುವ ಇಬ್ಬರ ವಿರುದ್ಧ ಪೊಲೀಸರು ಸೋಮವಾರ ಕೇಸ್ ದಾಖಲಿಸಿದ್ದಾರೆ.

ನಟಿ ಹೆಸರಿನಲ್ಲಿ 13.5 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ಎಂಬುವವರ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಈ ಇಬ್ಬರು ಆರೋಪಿಗಳು ನಟಿ ಪ್ರಣೀತಾ ಅವರನ್ನು ಬ್ರಾಂಡ್ ಅಂಬಾಸೀಡರ್ ಮಾಡುವುದಾಗಿ ನಂಬಿಸಿ ನಟಿ ಹೆಸರಿನಲ್ಲಿ ಎಸ್.ವಿ ಗ್ರೂಪ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಕಂಪನಿಯಿಂದ ಹಣ ಪಡೆದು ಪರಾರಿಯಾಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೇಲ್ ಗೆ ಎಸ್.ವಿ.ಗ್ರೂಪ್ ಮ್ಯಾನೇಜರ್ ಅವರನ್ನು ಕರೆಸಿಕೊಂಡಿದ್ದ ಆರೋಪಿಗಳು, ನಾವು ನಟಿ ಪ್ರಣೀತಾಳ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನಟಿಯನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ಡೀಲ್ ಕುದುರಿಸಿದ್ದಾರೆ. ನೀವು ಹಣ ನೀಡಿದರೆ ಪ್ರಣೀತಾ ಇನ್ನೊಂದು ಗಂಟೆಯಲ್ಲಿ ಬಂದು ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ನೀವು 13.5 ಲಕ್ಷ ರೂ. ಪಾವತಿಸಿ ಎಂದು ಹೇಳಿದ್ದಾರೆ. ಆರೋಪಿಗಳ ಮಾತು ನಂಬಿ ಮ್ಯಾನೇಜರ್ 13.5 ಲಕ್ಷ ರೂ. ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ರೂಮ್ ಒಳಗೆ ಹೋಗಿ ಬರೋದಾಗಿ ಹೇಳಿ ಆರೋಪಿಗಳು ಪರಾರಿಯಾಗಿದ್ದಾರೆ

No Comments

Leave A Comment