Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಇಬ್ಬರು ಬೈಕ್ ಕಳ್ಳರ ಬಂಧನ: 8 ಲಕ್ಷ ರೂ. ಮೌಲ್ಯದ 13 ಮೋಟಾರ್ ಸೈಕಲ್ ಗಳ ವಶ

ಬೆಂಗಳೂರು: ರಾತ್ರಿ ವೇಳೆಯಲ್ಲಿ ಬೆಲೆಬಾಳುವ ಮೋಟಾರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬೊಮ್ಮನಹಳ್ಳಿ ಪೊಲೀಸರು 8 ಲಕ್ಷ ರೂ.ಮೌಲ್ಯದ 13 ಮೋಟಾರ್  ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಕಗ್ಗಲಿಪುರ ಮುಖ್ಯರಸ್ತೆಯ ಮಹದೇಶ್ವರ  ದೇವಸ್ಥಾನ ಹತ್ತಿರದ ನಿವಾಸಿ ಸತೀಶ್ ಅಲಿಯಾಸ್ ಅತ್ಯ (22), ಜೆಪಿನಗರ 2ನೇ ಹಂತ, ಕೆಎಸ್ ಆರ್ ಟಿಸಿ ಲೇಔಟ್ ನ ನಿವಾಸಿ ಮಣಿಕಂಠ ಅಲಿಯಾಸ್ ಮಣಿ ಅಲಿಯಾಸ್ ಅಪ್ಪಿ (25) ಬಂಧಿತ ಆರೋಪಿಗಳು.

ಆರೋಪಿಗಳಿಂದ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳವು ಆಗಿದ್ದ 8 ಲಕ್ಷ ರೂ. ಮೌಲ್ಯದ  ಸುಜುಕಿ ಆಕ್ಸಿಸ್,  ಹೋಂಡಾ ಆಕ್ಟಿವಾ, ಒಂದು ಯಮಹಾ ಆರ್ ಎಕ್ಸ್ 135 ಮೋಟಾರ್ ಸೈಕಲ್, ಮೂರು ಬಜಾಜ್ ಪಲ್ಸರ್  ಸೇರಿದಂತೆ 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

No Comments

Leave A Comment