Log In
BREAKING NEWS >
ನವೆ೦ಬರ್ 30ಕ್ಕೆ ಮು೦ದಿನ ಶ್ರೀಕೃಷ್ಣಾಪುರ ಮಠದ ಪರ್ಯಾಯಕ್ಕೆ ಬಾಳೆಮುಹೂರ್ತ.....ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಸಂತೋಷದಿಂದ, ಸಂಪೂರ್ಣ ಒಪ್ಪಿಗೆಯಿಂದ ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದೇನೆ: ರಾಮುಲು

ಬೆಂಗಳೂರು: ಸರ್ಕಾರ ರಚನೆ ಆದಾಗಲೇ ನನಗೆ ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಸಿಎಂ ಯಡಿಯೂರಪ್ಪ ಅವರ ಬಳಿ ಕೇಳಿಕೊಂಡಿದ್ದೆ. ಆದರೆ ಆಗ ಹಲವು ಕಾರಣಗಳಿಂದ ಆರೋಗ್ಯ ಇಲಾಖೆ ನೀಡಿದ್ದರು. ಈಗ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಸಂತೋಷದಿಂದ, ಸಂಪೂರ್ಣ ಒಪ್ಪಿಗೆಯಿಂದ ಒಪ್ಪಿಕೊಂಡಿದ್ದೇನೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆ.ಸುಧಾಕರ್  ಅವರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಉಭಯ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಳ್ಳೆಯ ಕೆಲಸ ಮಾಡಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪ.ಜಾತಿ ಮತ್ತು ಪಂಗಡ ಪರವಗಿ ಕೆಲಸ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸುಧಾಕರ್ ಒಬ್ಬರೆ ವಹಿಸಿದರೆ ಸುಧಾರಣೆ ಆಗುತ್ತದೆ ಎಂದು ಅವರಿಗೆ ನೀಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎರಡೂ ಖಾತೆ ಒಟ್ಟಿಗೆ ಇದ್ದರೆ ಸುಲಭವಾಗಿ ಕೆಲಸ ಮಾಡಬಹುದು ಎಂದು ರಾಮುಲು ಹೇಳಿದರು.

ಖಾತೆ ಬದಲಾವಣೆ ಬಗ್ಗೆ ಈ ಹಿಂದೆಯೇ ಚರ್ಚೆ ಮಾಡಿದ್ದೆವು. ನಾನು ಮತ್ತು ಸುಧಾಕರ್ ಇಬ್ಬರೂ ಚರ್ಚೆ ಮಾಡಿದ್ದೆವು ಎಂದರು.

ನಂತರ ಮಾತನಾಡಿದ ಸುಧಾಕರ್, ರಾಜಕಾರಣದಲ್ಲಿ, ಪಕ್ಷದಲ್ಲಿ ನನಗಿಂತ ರಾಮುಲು ನನಗಿಂತ ಹಿರಿಯರು. ಈ ಸಮಯದಲ್ಲಿ ಸಂಪುಟ ವಿಸ್ತರಣೆ ಆಗಬೇಕಿತ್ತು, ಆದರೆ ಉಪಚುನಾವಣೆ ಸೇರಿದಂತೆ ಕೆಲವು ಕಾರಣಗಳಿಂದ ಮುಂದೂಡಿಕೆಯಾಗಿದೆ. ಆದ್ದರಿಂದ ಈಗ ಖಾತೆ ಬದಲಾವಣೆ ಮಾಡಿದ್ದಾರೆ ಎಂದರು.

ಕೆಳ ಹಂತದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ನಡುವೆ ಸಮನ್ವಯದ ಕೊರತೆಯಿದೆ. ಇದೆಲ್ಲವನ್ನು ಸರಿಮಾಡಿ ಕೋವಿಡ್ ನಿಯಂತ್ರಣ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದರು.

No Comments

Leave A Comment