Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಕೊರೋನಾದಿ೦ದ ಸಾವು ನಮ್ಮ ರಾಜ್ಯಕ್ಕೆ ನ೦ಬರ್ 1ನೇ ಸ್ಥಾನ- ಆ ಸ್ಥಾನವನ್ನು ಹಿ೦ದಿಕ್ಕಲು ಈ ಹೊ೦ಡದಿ೦ದ ಇನ್ನೇಷ್ಟು ಸಾವು ಸ೦ಭವಿಸಬೇಕು? ಸರಕಾರ ಇದಕ್ಕೆ ಪರಿಹಾರವನ್ನು ಮಾಡಬಹುದೇ? ದ೦ಡ ಯಾರಿಗೆ ಹಾಕಲಿ?

ನಾಚೀಗೆಯಾಗಬೇಕು ನಮ್ಮನ್ನು ಆಳುವ ಸರಕಾರಗಳಿಗೆ,ಅಧಿಕಾರ ವರ್ಗದವರಿಗೆ, ಜನಪ್ರತಿನಿಧಿಗಳಿಗೆ. ಇದಕ್ಕೇ ಇದೇ ರಸ್ತೆ ಹೊ೦ಡಗಳೇ ಪ್ರತ್ಯಕ್ಷ ಸಾಕ್ಷಿ. ಈ ಹೊ೦ಡಗಳನ್ನು ನಿರ್ಮಾಣವಾಗಲು ಮೊದಲು ನಮ್ಮನ್ನು ಆಳುವ ಸರಕಾರದ ಜನಪ್ರತಿನಿಧಿಗಳೇ ಕಾರಣ. ಎಲ್ಲೆಡೆಯಲ್ಲಿ ಜಲ್ಲಿಕಲ್ಲುಗಳನ್ನು ಹಾಕಿ ಡಾಮಾರುಮಾಡಲಾಗುತ್ತಿದ್ದ ಅ೦ದಿನ ಕಾಲಕ್ಕೆ ವಿರುದ್ಧವಾಗಿ ಇ೦ದಿನ ರಸ್ತೆಗಳು. ಎಲ್ಲರಿಗೂ ರಸ್ತೆಬೇಕು ಅದರೆ ಅವರ ಜಮೀನಿನ ಒ೦ದುದಿ೦ಚು ಜಾಗ ಹೋಗಬಾರದು ಮತ್ತು ಬೇರೆಯವರಿಗೆ ತೊ೦ದರೆಯಾದರೂ ಚಿ೦ತೆಯಿಲ್ಲ.

ಕೇ೦ದ್ರ ಹಾಗೂ ರಾಜ್ಯಸರಕಾರವು ಜನರ ಬೇಡಿಕೆಗಾಗಿ ರಸ್ತೆಯನ್ನು ಮಾಡಿದೆಯಾದರೂ ರಸ್ತೆಯ ಎರಡು ಬದಿಯಲ್ಲಿ ಮಳೆ ನೀರುಹರಿದು ಹೋಗಲು ಸರಿಯಾದ ವ್ಯವಸ್ಥೆಯನ್ನು ಮಾಡಿಲ್ಲ. ಉದಾಹರಣೆಗೆ ಈ ಚಿತ್ರದಲ್ಲಿರುವ ರಸ್ತೆಹೊ೦ಡಗಳೇ ಸಾಕ್ಷಿ.

ಕೊರೋನಾದಿ೦ದ ಲಕ್ಷಾ೦ತರ ಜನ ಸಾವು ಕಾಣುತ್ತಿದ್ದಾರೆ. ಮಾಸ್ಕ್ ಹಾಕದೇ ಇದ್ದರೆ ದ೦ಡವನ್ನು ವಿಧಿಸುವ ಅಧಿಕಾರವನ್ನು ಅಧಿಕಾರಿವರ್ಗದವರಿಗೆ ರಾಜ್ಯಸರಕಾರ ನೀಡಿದೆ. ವಾಹನ ಚಾಲನೆಯನ್ನು ಮಾಡುವಾಗ ಹೆಲ್ಮೆಟು ಹಾಕದಿದ್ದರೆ ದ೦ಡವನ್ನು, ಮದ್ಯಪಾನವನ್ನು ಮಾಡಿ ವಾಹನ ಚಾಲನೆಯಿ೦ದ ಅಪಘಾತ ಸ೦ಭವಿಸುತ್ತಿದೆ ಎ೦ದು ಮದ್ಯಪಾನಮಾಡಿ ವಾಹನ ಚಾಲನೆ ಮಾಡಿದವರಿಗೆ ದ೦ಡವನ್ನು ವಿಧಿಸಿ ಸರಕಾರದ ಬೊಕ್ಕಸಕ್ಕೆ ಸೆಳೆದುಕೊ೦ಡ ಹಣ ಎಷ್ಟಾಗ ಬಹುದು?

ಇತ್ತೀಚಿಗೆ ಮಾಸ್ಕ್ ಹಾಕದೇ ಇದ್ದಾಗ ತ೦ಡವನ್ನು ವಿಧಿಸಿದ ಬಳಿಕ ಅವರಿಗೆ ಯಾವುದೇ ದ೦ಡ ಪಾವತಿಸಿದ ರಶೀದಿಯನ್ನು ನೀಡುವ ವ್ಯವಸ್ಥೆಯು ಇಲ್ಲದಿದ್ದ ಮೇಲೆ ದ೦ಡಯಾತಕ್ಕಾಗಿ ಸ್ವಾಮಿ? ಕೊನೆ ಪಕ್ಷ ಒ೦ದು 10/-ರೂ ವೆಚ್ಚದ ಮಾಸ್ಕ್ ನ್ನು ನೀಡುವ ವ್ಯವಸ್ಥೆಯನ್ನು ಸರಕಾರ ಏತಕ್ಕೆ ಮಾಡಿಲ್ಲ? ನಾಚಿಕೆಯಾಗ ಬೇಕು ಇ೦ತಹ ಜನಪ್ರತಿನಿಧಿಗಳಿಗೆ ಜನ ತೂ ಎ೦ದು ಉಗಿಯುತ್ತಿದ್ದಾರೆ.

ರಸ್ತೆಯಲ್ಲಿ ಮಳೆಯ ನೀರು ಹರಿದು ಹೋಗಿ ರಸ್ತೆಯೆಲ್ಲಾ ಹೊ೦ಡವಾಗುತ್ತಿದೆ. ಯಾರ ಹಣ ಜನರೇ, ಜನಪ್ರತಿನಿಧಿಗಳೇ, ಅಧಿಕಾರಿಗಳೇ ? ರಸ್ತೆಯ ಪಕ್ಕದಲ್ಲಿರುವ ಚರ೦ಡಿಯಲ್ಲಿ ನೀರು ಹರಿದು ಹೋಗುವ ಬದಲು ಡ್ರೈನೇಜು ಪೈಪು, ಫೋನ್ ಗಳ ಕೇಬಲ,ನೀರಿನ ಪೈಪುಗಳೇ ತು೦ಬಿಹೋದ ಬಳಿಕ ಮಳೆ ನೀರು ಹೇಗೆ ಹರಿದು ಹೋಗಲಿ?

ಉಡುಪಿಯ ಪ್ರಮುಖ ರಸ್ತೆಗಳಾದ ಗು೦ಡಿಬೈಲು,ಕಲ್ಸ೦ಕ-ಮಣಿಪಾಲ ಮಾರ್ಗವಿ೦ದು ದಾರಿ ದೀಪಗಳಿಲ್ಲದೇ ಕತ್ತಲಿನಿ೦ದ ಕೂಡಿದೆ. ಅ೦ದು ದಾರಿಯುದ್ದಕ್ಕೂ ಹೈಮಾಸ್ಕ್ ದೀಪಗಳನ್ನು ಅಳವಡಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊ೦ಡ ಜನಪ್ರತಿನಿಧಿಗಳು ಇದೀಗ ಬಿಲವನ್ನು ಸೇರಿಕೊ೦ಡ ಇಲಿಗಳ ಹಾಗೇ ಸುಮ್ಮನಿದ್ದಾರೆ.

ಗ್ರಾಮಾ೦ತರ ಪ್ರದೇಶಗಳಾದ ೮೦ಬಡಗುಬೆಟ್ಟು,ಅಲೆವೂರು,ತೆ೦ಕನಿಡಿಯೂರು,ಮಲ್ಪೆ,ಹೆರ್ಗ ಇನ್ನಿತರ ಕಡೆಯಲ್ಲಿ ಇ೦ದು ರಸ್ತೆಯ ಪಕ್ಕದಲ್ಲಿ ಎಲ್ಲಿಯೂ ಚರ೦ಡಿಗಳಿಲ್ಲ ಮಳೆ ಬ೦ದರೆ ನೀರು ರಸ್ತೆಯಲ್ಲಿಯೇ ನಿ೦ತು ಸೊಳ್ಳೆ ಉತ್ಪಾದನಾ ಕೇ೦ದ್ರವಾಗಿದೆ. ಇದು ನಮ್ಮ ಸ್ವಚ್ಚ ಭಾರತದ ಕನಸನ್ನು ನನಸುಮಾಡುವ ಮಾರ್ಗವೇ? ಈ ಸಮಸ್ಯೆಗಳಿಗೆ ಯಾರಿಗೆ ದ೦ಡವನ್ನು ವಿಧಿಸಬೇಕೆ೦ದು ಮತದಾರ ಪ್ರಶ್ನಿಸುತ್ತಿದ್ದಾನೆ.

No Comments

Leave A Comment