Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಎಡನೀರು ತೋಟಕಾಚಾರ್ಯ ಸಂಸ್ಥಾನದ ಮಠಕ್ಕೆ ಪೀಠಾಧಿಪತಿಗಳಾಗಿ ದೀಕ್ಷಿತರಾಗಲಿರುವ ಜಯರಾಮ ಮಂಜತ್ತಾಯ ಶ್ರೀ ಕೃಷ್ಣ ಮಠಕ್ಕೆ ಭೇಟಿ

ಶ್ರೀ ಕೃಷ್ಣ ಮಠಕ್ಕೆ  ಎಡನೀರು ತೋಟಕಾಚಾರ್ಯ ಸಂಸ್ಥಾನದ ಮಠಕ್ಕೆ ಪೀಠಾಧಿಪತಿಗಳಾಗಿ ದೀಕ್ಷಿತರಾಗಲಿರುವ ಜಯರಾಮ ಮಂಜತ್ತಾಯ ಇವರು ಆಗಮಿಸಿ ದೇವರ ದರ್ಶನ ಪಡೆದು, ಸರ್ವಜ್ಞ ಪೀಠದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಹಾಗೂ ಕಡೆಕಾರ್ ಶ್ರೀಶ ಭಟ್,ಕುಂಟಾರು ರವೀಶ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

 ಎಡನೀರು ತೋಟಕಾಚಾರ್ಯ ಸಂಸ್ಥಾನದ ಮಠಕ್ಕೆ  ಪೀಠಾಧಿಪತಿಗಳಾಗಿ ದೀಕ್ಷಿತರಾಗಲಿರುವ ಜಯರಾಮ ಮಂಜತ್ತಾಯ ಇವರು ಉಡುಪಿ  ಪಲಿಮಾರು ಮಠದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ  ಕಿರಿಯ  ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರನ್ನು ಭೇಟಿ ಮಾಡಿ  ಅನುಗ್ರಹ ಮಂತ್ರಾಕ್ಷತೆ ಪಡೆದರು.

ಈ ಸಂದರ್ಭದಲ್ಲಿ ಕಡೆಕಾರ್  ಶ್ರೀಶ ಭಟ್,ಕುಂಟಾರು ರವೀಶ ತಂತ್ರಿ ಸ್ವಾಮೀಜಿಯವರ ಆಪ್ತಸಹಾಯಕರಾದ ಗಿರೀಶ ಉಪಾಧ್ಯಾಯ,ಪ್ರೊ.ಎಂ.ಎಲ್.ಸಾಮಗ ಮೊದಲಾದವರು ಉಪಸ್ಥಿತರಿದ್ದರು.ಉಡುಪಿ ಕೃಷ್ಣಾಪುರ ಮಠಕ್ಕೆ ಎಡನೀರು ತೋಟಕಾಚಾರ್ಯ ಸಂಸ್ಥಾನದ ಮಠಕ್ಕೆ  ನಿಯೋಜಿತ ಪೀಠಾಧಿಪತಿಗಳಾದ  ಶ್ರೀ ಜಯರಾಮ ಮಂಜತ್ತಾಯ ಇವರು ಭೇಟಿ ನೀಡಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ  ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

No Comments

Leave A Comment