ಪೂಜಾಬೇಡಿ ಜಾಲತಾಣ ಹ್ಯಾಕ್ ಪಣಜಿ: ಬಾಲಿವುಡ್ ನಟಿ ಪೂಜಾಬೇಡಿ ತಮ್ಮ ಇ-ಕಾಮರ್ಸ್ ಜಾಲತಾಣ ಹ್ಯಾಕ್ ಆಗಿದೆಯೆಂದು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ. ಹ್ಯಾಕರ್ಗಳು ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ, ತಾವು ಕೇಳಿದಷ್ಟು ಹಣ ಕೊಡದಿದ್ದರೆ ಆ ಜಾಲತಾಣದಲ್ಲಿ ಡ್ರಗ್ಸ್ ಮಾರುವುದಾಗಿ ಬೆದರಿಕೆಯೊಡ್ಡಿದ್ದಾರೆಂದು ಪೂಜಾ ಬೇಡಿ ಎಫ್ಐಆರ್ ದಾಖಲಿಸಿದ್ದಾರೆ. ಕಳೆದೊಂದು ವಾರದಲ್ಲಿ ಎರಡನೇ ಬಾರಿ ಅವರ ಜಾಲತಾಣ ಹ್ಯಾಕ್ ಆಗಿದೆ. “”ನನ್ನ ಜಾಲತಾಣ ಹ್ಯಾಪಿಸೌಲ್.ಇನ್ ಮತ್ತೂಮ್ಮೆ ಹ್ಯಾಕ್ ಆಗಿದೆ. ಕೇಳಿದಷ್ಟು ಹಣ ಕೊಡದಿದ್ದರೆ ಅದರಲ್ಲಿ ಡ್ರಗ್ಸ್ ಮಾರುವುದಾಗಿ ಬೆದರಿಕೆ ಬಂದಿದೆ. ಒಂದು ವಾರದ ಹಿಂದೆಯೇ ಗೋವಾ ಸೈಬರ್ ಘಟಕಕ್ಕೆ ಎಫ್ಐಆರ್ ಸಲ್ಲಿಸಿ ದ್ದರೂ, ಪೊಲೀಸರು ಕ್ರಮ ಕೈಗೊಂಡಿಲ್ಲ” ಎಂದು ದೂರಿದ್ದಾರೆ. Share this:TweetWhatsAppEmailPrintTelegram