
ಬಾಗಲಕೋಟೆಯಲ್ಲಿ ಉರುಳಿ ಬಿದ್ದ ಹೈಟೆನ್ಶನ್ ಗೋಪುರ : ತಪ್ಪಿತು ಭಾರಿ ಅನಾಹುತ
ಬಾಗಲಕೋಟೆ: ಮುಧೋಳ ತಾಲೂಕು ವಜ್ಜರಮಟ್ಟಿಯ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 110 ಕೆವಿ ಬೀಳಗಿ (ಕಾತರಕಿ) ಗೋಪುರ ಕೊಪ್ಪ ಗ್ರಾಮದ ಹತ್ತಿರ ರವಿವಾರ ಸಂಜೆ ವೇಳೆ ಆಕಸ್ಮಿಕವಾಗಿ ಹಾನಿಗೊಳಗಾಗಿದೆ.
110 ಕೆವಿ ಮಾರ್ಗದ ಮೇಲೆ ಬರುವ ಬೀಳಗಿ, ಕಾತರಕಿ, ಗಿರಿಸಾಗರ, ಬಿಸನಾಳ, ತೋಳಮಟ್ಟಿ, ಶಿರಗುಪ್ಪಿ ಹಾಗೂ 33 ಕೆವಿ ತೆಗ್ಗಿ ಮತ್ತು ಅನಗವಾಡಿ ವಿದ್ಯುತ್ ಕೇಂದ್ರಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಸ್ಥಗಿತವಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಬೀಳಗಿ ತಾಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸದರಿ ಗೋಪುರ ಮರು ಜೋಡಣೆಯ ಕಾರ್ಯ ಕೈಗೊಳ್ಳಲಾಗಿದ್ದು, ಜೋಡಣೆಯ ಕಾರ್ಯ ಮಂಗಳವಾರ ಸಂಜೆ ಮುಕ್ತಾಯಗೊಂಡು ವಿದ್ಯುತ್ ಸರಬರಾಜು ಆಗುವ ಸಾಧ್ಯತೆಗಳಿವೆ.